ಕ್ಯಾಲಿಫೋರ್ನಿಯ: ತೆಲಂಗಾಣ ಯುವಕನಿಗೆ ಗುಂಡು

Update: 2017-06-08 15:47 GMT

ಕ್ಯಾಲಿಫೋರ್ನಿಯ, ಜೂ. 8: ಕ್ಯಾಲಿಫೋರ್ನಿಯದಲ್ಲಿ ನಾಲ್ಕು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೋರ್ವ ತೆಲಂಗಾಣದ ಯುವಕನೊಬ್ಬನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅವರ ಕುಟುಂಬ ಸದಸ್ಯರು ಗುರುವಾರ ಹೇಳಿದ್ದಾರೆ.

26 ವರ್ಷದ ಮುಬೀನ್ ಅಹ್ಮದ್‌ರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ತೆಲಂಗಾಣದ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸಯನ್ಸ್‌ನಲ್ಲಿ ಬಿಟೆಕ್ ಪಡೆದ ಬಳಿಕ ಅವರು 2015 ಫೆಬ್ರವರಿಯಲ್ಲಿ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಹೋಗಿದ್ದರು.

ಎರಡು ತಿಂಗಳ ಹಿಂದೆ ತನ್ನ ಕೋರ್ಸ್ ಪೂರ್ಣಗೊಳಿಸಿದ್ದ ಅವರು ಕ್ಯಾಲಿಫೋರ್ನಿಯ ಸಮೀಪದ ಡಿಪಾರ್ಟ್‌ಮೆಂಟ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ಯುವಕರು ಹಣ ಮತ್ತು ಮೊಬೈಲ್ ಫೋನ್ ನೀಡುವಂತೆ ಅವರನ್ನು ಬೆದರಿಸಿದರು. ಅವರು ನೀಡದೆ ಇದ್ದಾಗ ಗುಂಡು ಹಾರಿಸಿ ಪರಾರಿಯಾದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News