ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಖಚಿತ: ಎಫ್ ಬಿಐ ಮಾಜಿ ನಿರ್ದೇಶಕ ಜೇಮ್ಸ್ ಕೊಮೇ

Update: 2017-06-08 16:19 GMT

ವಾಷಿಂಗ್ಟನ್, ಜೂ.8: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಫ್ ಬಿಐ ಉಚ್ಛಾಟಿತ ನಿರ್ದೇಶಕ ಜೇಮ್ಸ್ ಕೊಮೇ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಉಚ್ಛಾಟಿತರಾದ ಜೇಮ್ಸ್ ಯು.ಎಸ್. ಸೆನೆಟ್ ಕಮಿಟಿಯ ಮುಂದೆ ಮಾತನಾಡಿ, ಶ್ವೇತಭವನವು ತನ್ನನ್ನು ದೂಷಿಸಲು ಆರಂಭಿಸಿತು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿದ್ದ ಜೇಮ್ಸ್ ಬಿ. ಕೋಮೆ ಅವರನ್ನು ಡೊನಾಲ್ಡ್ ಟ್ರಂಪ್ ಎಫ್ ಬಿಐ ನಿರ್ದೇಶಕ ಸ್ಥಾನದಿಂದ ಉಚ್ಛಾಟಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News