×
Ad

ಮ್ಯಾನ್ಮಾರ್ ಸೇನಾ ವಿಮಾನದ ಅವಶೇಷ ಪತ್ತೆ

Update: 2017-06-08 21:52 IST

ಯಾಂಗನ್, ಜೂ. 8: ನಾಪತ್ತೆಯಾಗಿರುವ ತನ್ನ ಸೇನಾ ವಿಮಾನದ ಅವಶೇಷಗಳು ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿವೆ ಎಂದು ಮ್ಯಾನ್ಮಾರ್ ಸೇನೆ ಗುರುವಾರ ಹೇಳಿದೆ. ವಿಮಾನದಲ್ಲಿ ಹಲವು ಮೃತದೇಹಗಳೂ ಪತ್ತೆಯಾಗಿವೆ.

ನತದೃಷ್ಟ ವಿಮಾನವು 122 ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ವಿಮಾನದಲ್ಲಿ 15 ಮಕ್ಕಳು ಸೇರಿದಂತೆ ಸೈನಿಕರ ಕುಟುಂಬ ಸದಸ್ಯರು, 35 ಸೈನಿಕರು ಮತ್ತು 14 ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

ದಕ್ಷಿಣ ಮ್ಯಾನ್ಮಾರ್‌ನ ಲಾಂಗ್ಲಾನ್ ಕರಾವಳಿಯಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ದೇಶದ ಸೇನಾಪತಿ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News