ಭಾರತದ ವಿರುದ್ಧ ಲಂಕೆಗೆ ಭರ್ಜರಿ ಜಯ

Update: 2017-06-08 18:15 GMT
ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 52 ರನ್

ಲಂಡನ್, ಜೂ.8: ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂದು ಭಾರತದ ವಿರುದ್ಧ ಶ್ರೀಲಂಕಾ 7 ವಿಕೆಟ್‌ಗಳ ಜಯ ಗಳಿಸಿತು.

ಕಿಂಗ್‌ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 322 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 322 ರನ್ ಗಳಿಸಿ ಗೆಲುವಿನ ದಡ ಸೇರಿತು.

ಶ್ರೀಲಂಕಾದ ಗುಣತಿಲಕ 76 ರನ್, ಕುಶಲ್ ಮೆಂಡಿಸ್ 89ರನ್‌,ತಿಸ್ಸರಾ ಪೆರೆರಾ (ಗಾಯಾಳು ನಿವೃತ್ತಿ 47ರನ್), ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 52 ರನ್ ಮತ್ತು ಗುಣರತ್ನೆ ಔಟಾಗದೆ 34 ರನ್ ಗಳಿಸಿ ಶ್ರೀಲಂಕಾವನ್ನು ಗೆಲುವಿನ ದಡ ಸೇರಿಸಿದರು.

ಭಾರತ 321/6: ಧವನ್ ದಾಖಲಿಸಿದ ಶತಕ,ರೋಹಿತ್ ಶರ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಅರ್ಧಶತಕ ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 321 ರನ್ ಗಳಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ದಾಂಡಿಗ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 138 ರನ್‌ಗಳ ಜೊತೆಯಾಟ ನೀಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು.

ರೋಹಿತ್ ಶರ್ಮ ಅವರು ಮಾಲಿಂಗ ಎಸೆತದಲ್ಲಿ ತಿಸ್ಸರಾ ಪೆರೆರಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರು 79 ಎಸೆತಗಳನ್ನು ಎದುರಿಸಿದರು. 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 78 ರನ್ ಗಳಿಸಿ ಔಟಾದರು.

ನಾಯಕ ವಿರಾಟ್ ಕೊಹ್ಲಿ(0) ಖಾತೆ ತೆರೆಯದೆ ಪ್ರದೀಪ್‌ಗೆ ವಿಕೆಟ್ ಒಪ್ಪಿಸಿದರು.ಯುವರಾಜ್ ಸಿಂಗ್ (7) ಮಿಂಚಲಿಲ್ಲ. ಭಾರತ 33.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿದ್ದಾಗ ಮಾಜಿ ನಾಯಕ ಧೋನಿ ಕ್ರೀಸ್‌ಗೆ ಆಗಮಿಸಿದರು. ಧೋನಿ ಅವರು ಧವನ್‌ಗೆ ಉತ್ತಮ ಬೆಂಬಲ ನೀಡಿದರು.

ಶಿಖರ್ ಧವನ್ ಮತ್ತು ಧೋನಿ 4ನೆ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು.

 ಧವನ್ 112 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ 10ನೆ ಏಕದಿನ ಶತಕ ಪೂರ್ಣಗೊಳಿಸಿದರು. ಚಾಂಪಿಯನ್ಸ್‌ಟ್ರೋಫಿಯಲ್ಲಿ ಇದು ಅವರ ಮೂರನೆ ಶತಕವಾಗಿದೆ. 44.1ಓವರ್‌ನಲ್ಲಿ ಧವನ್ ನಿರ್ಗಮಿಸಿದರು ಔಟಾಗುವ ಮೊದಲು ಅವರು 125 ರನ್(128ಎ,15 ಬೌಂಡರಿ , 1 ಸಿಕ್ಸರ್ ) ಗಳಿಸಿದರು.

   ಹಾರ್ದಿಕ್ ಪಾಂಡ್ಯ ಮಿಂಚಲಿಲ್ಲ. ಧೋನಿ ಮತ್ತು ಕೇದಾರ್ ಜಾದವ್ ಆರನೆ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ನೀಡಿದರು. ಧೋನಿ 63 ರನ್(52ಎ, 7ಬೌ,2ಸಿ) ಗಳಿಸಿ ಔಟಾದರು. ಜಾಧವ್ ಔಟಾಗದೆ 25 ರನ್(13ಎ, 3ಬೌ,3ಸಿ) ಗಳಿಸಿದರು.

   ಶ್ರೀಲಂಕಾದ ಪರ ಲಸಿತ್ ಮಾಲಿಂಗ 70ಕ್ಕೆ 2 ವಿಕೆಟ್,ಲಕ್ಮಲ್, ಪ್ರದೀಪ್,ತಿಸ್ಸರಾ ಪೆರೆರಾ ಮತ್ತು ಗುಣರತ್ನೆ ತಲಾ 1 ವಿಕೆಟ್ ಪಡೆದರು.

ಸ್ಕೋರ್ ವಿವರ

ಭಾರತ: 50 ಓವರ್‌ಗಳಲ್ಲಿ 321/6

ರೋಹಿತ್ ಶರ್ಮ ಸಿ ಪೆರೇರ ಬಿ ಮಾಲಿಂಗ 78

ಶಿಖರ್ ಧವನ್ ಸಿ ಮೆಂಡಿಸ್ ಬಿ ಮಾಲಿಂಗ 125

ವಿರಾಟ್ ಕೊಹ್ಲಿ ಸಿ ಡೆಕ್‌ವೆಲ್ಲಾ ಬಿ ಪ್ರದೀಪ್ 00

ಯುವರಾಜ್ ಸಿಂಗ್ ಸಿ ಗುಣರತ್ನೆ 07

ಎಂಎಸ್ ಧೋನಿ ಸಿ ಚಾಂಡಿಮಲ್ ಬಿ ಪೆರೇರ 63

ಹಾರ್ದಿಕ್ ಪಾಂಡ್ಯ ಸಿ ಪೆರೇರ ಬಿ ಲಕ್ಮಲ್ 9

ಕೇದಾರ್ ಜಾಧವ್ ಅಜೇಯ 25

ರವೀಂದ್ರ ಜಡೇಜ ಅಜೇಯ 00

ಇತರ 14

ವಿಕೆಟ್‌ಪತನ: 1-138, 2-139, 3-179, 4-261, 5-278, 6-307.

ಬೌಲಿಂಗ್ ವಿವರ:

ಲಸಿತ್ ಮಾಲಿಂಗ 10-0-70-2

ಲಕ್ಮಲ್ 10-1-72-1

ಪ್ರದೀಪ್ 10-0-73-1

ಪೆರೇರ 9-0-54-1

ಗುಣತಿಲಕ 8-0-41-0

ಗುಣರತ್ನೆ 3-0-7-1.

ಶ್ರೀಲಂಕಾ 48.4 ಓವರ್‌ಗಳಲ್ಲಿ 322/3

ಡಿಕ್‌ವೆಲ್ಲಾ ಸಿ ಜಡೇಜ ಬಿ ಕುಮಾರ್ 07

ಗುಣತಿಲಕ ರನೌಟ್(ಯಾದವ್/ಧೋನಿ) 76

ಕುಶಾಲ್ ಮೆಂಡಿಸ್ ರನೌಟ್(ಕುಮಾರ್) 89

ಪೆರೇರ ಗಾಯಾಳು ನಿವೃತ್ತಿ 47

ಆ್ಯಂಜೆಲೊ ಮ್ಯಾಥ್ಯೂಸ್ ಅಜೇಯ 52

ಗುಣರತ್ನೆ ಅಜೇಯ 34

ಇತರ 17

 ವಿಕೆಟ್‌ಪತನ: 1-11, 2-170, 3-196, 3-271

ಬೌಲಿಂಗ್ ವಿವರ

ಭುವನೇಶ್ವರ ಕುಮಾರ್ 10-0-54-1

ಉಮೇಶ್ ಯಾದವ್ 9.4-0-67-0

ಜಸ್‌ಪ್ರಿತ್ ಬುಮ್ರಾ 10-0-52-0

ಹಾರ್ದಿಕ್ ಪಾಂಡ್ಯ 7-1-51-0

ರವೀಂದ್ರ ಜಡೇಜ 6-0-52-0

ಕೇದಾರ್ ಜಾಧವ್ 3-0-18-0

ವಿರಾಟ್ ಕೊಹ್ಲಿ 3-0-17-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News