ದೇಶದ ಅತ್ಯುತ್ತಮ ವಿಜ್ಞಾನ ಕಾಲೇಜುಗಳಲ್ಲಿ ಅಲೋಶಿಯಸ್ ಕಾಲೇಜಿಗೆ 23ನೆ ರ‍್ಯಾಂಕ್

Update: 2017-06-10 07:26 GMT

ಮಂಗಳೂರು, ಜೂ.10: ನಗರದ ಸ್ವಾಯತ್ತ ಸಂತ ಅಲೋಶಿಯಸ್ ಕಾಲೇಜು ಇತ್ತೀಚಿನ ವರ್ಷಗಳಲ್ಲಿ ಮಾಡಿದ ಅನೇಕ ಸಾಧನೆಗಳ ಜೊತೆಗೆ, ವೀಕ್ - ಹನ್ಸಾ ಪತ್ರಿಕೆ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ದೇಶದ ಅತ್ಯುತ್ತಮ ವಿಜ್ಞಾನ ಕಾಲೇಜುಗಳಲ್ಲಿ 23ನೆ ರ‍್ಯಾಂಕ್ ಗಳಿಸಿದೆ.

ರಾಜ್ಯಮಟ್ಟದಲ್ಲಿ ಕಾಲೇಜು 4ನೆ ಸ್ಥಾನದಲ್ಲಿದೆ. ಸತತವಾಗಿ ವೀಕ್ ಪತ್ರಿಕೆ ಕಳೆದ 5 ವರ್ಷಗಳಿಂದ ದೇಶದ ಉತ್ತಮ ಕಾಲೇಜುಗಳನ್ನು ಗುರುತಿಸುತ್ತಾ ಬಂದಿದೆ. ಕಳೆದ ಸಾಲಿನಲ್ಲಿ 24ನೆ ರ‍್ಯಾಂಕ್ ಗಳಿಸಿದ್ದ ಕಾಲೇಜು ಈ ಬಾರಿ 23ನೆ ರ್ಯಾಂಕ್ ಗಳಿಸಿ ತನ್ನ ಸ್ಥಾನವನ್ನು ಮೇಲ್ದರ್ಜೆಗೇರಿಸಿಕೊಂಡಿದೆ. ಈ ಅಧ್ಯಯನದಲ್ಲಿ ಕಾಲೇಜು ವಿಜ್ಞಾನ ಪದವಿಯಲ್ಲಿ ಮಾಡಿರುವ ಸಾಧನೆಗಳನ್ನು ಗುರುತಿಸಲಾಗಿದೆ. ಪ್ರಮುಖವಾಗಿ ಶಿಕ್ಷಕರ ಸಾಧನೆಗಳು, ವಿದ್ಯಾರ್ಥಿಗಳ ಸಾಧನೆಗಳು, ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಪ್ರಗತಿ, ವಿದ್ಯಾರ್ಥಿಗಳ ಉದ್ಯೋಗ ಪ್ರವೇಶಾತಿ, ಗ್ರಂಥಾಲಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಶಿಕ್ಷಕ-ವಿದ್ಯಾರ್ಥಿ ಅನುಪಾತ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಗಮನಿಸಿ ರ‍್ಯಾಂಕ್ ನೀಡಲಾಗಿದೆ.

ಇತ್ತೀಚೆಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ 44ನೆ ರ‍್ಯಾಂಕ್ ನೀಡಿತ್ತು. ಅನೇಕ ವರ್ಷಗಳ ನಂತರ, ಪ್ರಸಕ್ತ ಸಾಲಿನಲ್ಲಿ ಕಾಲೇಜಿನ ಮೂಲಭೂತ ವಿಜ್ಞಾನ ಪದವಿ ಕೋರ್ಸುಗಳಿಗೆ (ಬಿ.ಎಸ್ಸಿ) ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ವಿಜ್ಞಾನದ ಎಲ್ಲಾ ಕೋರ್ಸುಗಳೂ ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News