×
Ad

ಸಾವಿರಾರು ವರ್ಷಗಳ ರಚನೆಯನ್ನು ನಿಮಿಷದೊಳಗೆ ಧ್ವಂಸಗೈದ!: ವೈರಲ್ ವಿಡಿಯೋ

Update: 2017-06-10 17:42 IST

ಚೀನಾ, ಜೂ.10: ಸಾವಿರಾರು ವರ್ಷಗಳ ಹಿಂದೆ ಪ್ರಾಕೃತಿಕ ಬದಲಾವಣೆಯಿಂದ ನಿರ್ಮಿಸಲ್ಪಟ್ಟ ಅತ್ಯಂತ ಹಳೆಯ ಸುಣ್ಣದಕಲ್ಲಿನ ರಚನೆಯನ್ನು ವ್ಯಕ್ತಿಯೊಬ್ಬ ಕ್ಷಣಾರ್ಧದಲ್ಲೇ ದ್ವಂಸಗೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

ಗುಝೂನ ಸಾಂಗ್ಟೋ ಎಂಬಲ್ಲಿ ನಡೆದ ಡ್ರ್ಯಾಗನ್ ಬೋಟ್ ಫೆಸ್ಟಿವಲ್ ನಲ್ಲಿ ಸಾವಿರಾರು ವರ್ಷಗಳ ಪ್ರಾಕೃತಿಕ ಬದಲಾವಣೆ, ಚಟುವಟಿಕೆಗಳಿಂದ ತಯಾರಾದ ಅಪರೂಪದ ನೀರ್ಗಲ್ಲುಗಳನ್ನು ಕೆಲ ಹೊತ್ತು ವೀಕ್ಷಿಸುವ ವ್ಯಕ್ತಿಯೋರ್ವ ಅದನ್ನು ತುಳಿದು ನಾಶಗೊಳಿಸುವ ದೃಶ್ಯಗಳು ವಿಡಿಯೋದಲ್ಲಿದೆ.

ಒಂದು ವೇಳೆ ಈ ವ್ಯಕ್ತಿ ಸಿಕ್ಕಿಬಿದ್ದಲ್ಲಿ ಭಾರೀ ದಂಡ ತೆರಬೇಕಾದ ಸಾಧ್ಯತೆಗಳೂ ಇವೆ. ಇಷ್ಟೇ ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಕ್ತಿಯ ನಡತೆಯನ್ನು ಹಲವರು ಟೀಕಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News