ಅಫ್ಘಾನ್: ಮಸೀದಿಯಲ್ಲಿ ಗುಂಡು ಹಾರಿಸಿ ಮೂವರ ಹತ್ಯೆ; 9 ಮಂದಿಗೆ ಗಾಯ
Update: 2017-06-10 20:01 IST
ಕಾಬೂಲ್,ಜೂ.11: ಪೂರ್ವ ಅಫ್ಘಾನಿಸ್ತಾನದಲ್ಲಿ ಶುಕ್ರವಾರ ಮಸೀದಿಯೊಂದರ ಒಳಗಡೆ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡುಹಾರಿಸಿ, ಮೂವರು ನಾಗರಿಕರನ್ನು ಹತ್ಯೆಗೈದಿದ್ದಾನೆ. ಗುಂಡಿನ ದಾಳಿಯಲ್ಲಿ ಇತರ ಒಂಭತ್ತು ಮಂದಿ ಗಾಯಗೊಂಡಿದ್ದಾರೆ.
ಪಾಕಿಟಾ ಪ್ರಾಂತದ ರಾಜಧಾನಿ ಗಾರ್ದೆಝ್ ನಗರದಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಘಟನೆಯನ್ನು ಅಫ್ಘಾನಿಸ್ತಾದ ಗೃಹ ಸಚಿವಾಲಯ ಪ್ರಬಲವಾಗಿ ಖಂಡಿಸಿದ್ದು, ಇದು ಇಸ್ಲಾಂ ಹಾಗೂ ಮಾನವತೆಯ ವಿರುದ್ಧದ ಕೃತ್ಯವಾಗಿದೆಯೆಂದು ಹೇಳಿದೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ವಹಿಸಿಕೊಂಡಿಲ್ಲ.