ಕೋಮುವಾದದ ವಿಷ ತುಂಬಿರುವ ಹಾವುಗಳನ್ನು ಮೆಟ್ಟಿನಿಂತ ಗಾಂಧೀಜಿ “ಚತುರ್ ಬನಿಯಾ”ಗಿಂತ ಹೆಚ್ಚು: ರಾಜ್ ಮೋಹನ್ ಗಾಂಧಿ

Update: 2017-06-10 18:36 GMT

ಹೊಸದಿಲ್ಲಿ, ಜೂ.10: “ಬ್ರಿಟಿಷ್ ಸಿಂಹ”ಗಳನ್ನು ಹಾಗೂ “ಕೋಮುವಾದದ ವಿಷವಿರುವ ಹಾವುಗಳನ್ನು” ಮೆಟ್ಟಿನಿಂತ ಗಾಂಧೀಜಿ “ಚತುರ್ ಬನಿಯಾ”ಗಿಂತ ಹೆಚ್ಚು ಎಂದು ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ರಾಜ್ ಮೋಹನ್ ಗಾಂಧಿ ಹೇಳಿದ್ದಾರೆ.

ಗಾಂಧೀಜಿಯವರ ಉದ್ದೇಶ ಹಾಗೂ ಅಮಿತ್ ಶಾ ಅವರಿಗಿಂತ ಭಿನ್ನವಾದುದು. ಬ್ರಿಟಿಷ್ ಸಿಂಹಗಳು ಹಾಗೂ ದೇಶದೊಳಗೆ ಕೋಮುವಾದದ ವಿಷ ತುಂಬಿದ್ದ ಹಾವುಗಳನ್ನು ಮೆಟ್ಟಿನಿಂತ ಗಾಂಧೀಜಿ “ಚತುರ್ ಬನಿಯಾ”ಗಿಂತ ಹೆಚ್ಚು. ಅಮಾಯಕ ಹಾಗೂ ದುರ್ಬಲ ವರ್ಗಗಳನ್ನು ಬೇಟೆಯಾಡುವ ಶಕ್ತಿಗಳನ್ನು ಸೋಲಿಸುವ ಗಾಂಧೀಜಿಯವರ ಗುರಿ ಅಮಿತ್ ಶಾಗಿಂತ ಭಿನ್ನವಾಗಿದೆ.” ಎಂದು ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ರಾಜ್ ಮೋಹನ್ ಗಾಂಧಿ ಹೇಳಿದ್ದಾರೆ.
ರಾಯ್ಪುರದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು “ಆತ ಬಹಳ ಚತುರ ಬನಿಯಾ” ಎಂದಿದ್ದರು.
ಶಾ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಅಮಿತ್ ಶಾ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News