×
Ad

ಮಕ್ಕಾ: ನಕಲಿ ಝಂಝಂ ನೀರು ವಿತರಣಾ ಕೇಂದ್ರ ಬಂದ್

Update: 2017-06-11 16:46 IST

ಮಕ್ಕಾ, ಜೂ. 11: ಮಕ್ಕದಲ್ಲಿ ನಕಲಿ ಝಂಝಂ ನಿರು ವಿತರಣಾ ಕೇಂದ್ರವನ್ನು ಅಧಿಕಾರಿಗಳು ದಾಳಿ ನಡೆಸಿ ಮುಚ್ಚಿಸಿದ್ದಾರೆ. ಮಕ್ಕಾದ ದಕ್ಷಿಣ ಬೈದಾಅ್ ವಲಯದಲ್ಲಿ ಖವಾಜಾತ್ ರಸ್ತೆಯ ಒಂದು ಕಂಪೌಂಡ್‌ನಲ್ಲಿದ್ದ ಕೇಂದ್ರವನ್ನು ಅಝೀಝಿಯದ ಬಲಾದಿಯ(ಮುನ್ಸಿಪಾಲಿಟಿ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಝಂಝಂ ಎಂದು ನೀರನ್ನು ತುಂಬಿಸಿ ಈ ಕೇಂದ್ರದಿಂದ ವಿತರಿಸಲಾಗುತ್ತಿತ್ತು. ಏಷ್ಯದ ವ್ಯಕ್ತಿಗಳು ಈ ಕೇಂದ್ರವನ್ನು ನಡೆಸುತ್ತಿದ್ದು, ವಿತರಣೆಗೆ ಸಿದ್ಧಪಡಿಸಿಟ್ಟಿದ್ದ 1,700 ಬಾಟ್ಲಿಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಝೀಝಿಯದ ಬಲಾದಿಯ ಮುಖ್ಯಸ್ಥ,

ಇಂಜಿನಿಯರ್ ಗಾಝಿಬಿನ್ ಅಬ್ದುಲ್ ಖಾಲಿಕ್ ಅಲ್‌ಹರ್ಬಿ ತಿಳಿಸಿದ್ದಾರೆ. ಬಹಳಷ್ಟು ಖಾಲಿ ಬಾಟಲಿಗಳು, ಸ್ಟಿಕ್ಕರ್‌ಗಳು ಕೂಡಾ ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News