10ಲಕ್ಷ ರಿಯಾಲ್‌ನ ಕೇಬಲ್ ಕದ್ದು ಮಾರುವ ಯತ್ನ: ಇಬ್ಬರು ಪಾಕಿಸ್ತಾನಿಗಳ ಬಂಧನ
ಜುಬೈಲ್, ಜೂ. 11: ಹತ್ತುಲಕ್ಷ ರಿಯಾಲ್‌ನ ಕೇಬಲ್ ಕದ್ದು ಸೌದಿಅರೇಬಿಯದ ರಿಯಾದ್‌ನಿಂದ ಜುಬೈಲ್‌ಗೆ ತಂದು ಮಾರಲು ಪ್ರಯತ್ನಿಸಿದ ಇಬ್ಬರು ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ. ಟ್ರೈಲರ್ ಚಾಲಕ ರಹ್ಮತುಲ್ಲ, ತಾಜ್ ಬಕಂದರ್ ಎಂಬಿಬ್ಬರನ್ನು ಜುಬೈಲ್ ಪೊಲೀಸರುಬಂಧಿಸಿದ್ದು, ಇವರಿಬ್ಬರು ಒಂದು ಕಂಟೈನರ್ ಕೇಬಲ್‌ನ್ನು ಜುಬೈಲ್‌ಗೆ ತಂದು ಇಲ್ಲಿನ ಒಂದು ಕಂಪೆನಿಗೆ ಮಾರಲು ಯತ್ನಿಸುತ್ತಿದ್ದರು.
ರಿಯಾದ್‌ನಲ್ಲಿ ಟ್ರೈಲರ್ ಚಾಲಕ ಆಗಿದ್ದ ರಹ್ಮತುಲ್ಲಾನನ್ನು ಇನ್ನೊಬ್ಬ ಪಾಕಿಸ್ತಾನಿ ಇಕ್ರಾರ್ ಎನ್ನುವಾತ ಭೇಟಿಯಾಗಿ ಒಂದು ಕಂಟೈನರ್ ಸ್ಕ್ರಾಪ್‌ನ್ನು ಜುಬೈಲ್‌ಗೆ ತಲುಪಿಸಬಹುದೇ ಎಂದು ಕೇಳಿದ್ದಾನೆ.ಇದನ್ನು ಜುಬೈಲ್‌ಗೆ ಕೊಂಡು ಹೋದರೆ 900 ರಿಯಾಲ್ ಕೊಡುವುದಾಗಿ ಹೇಳಿದ್ದಾನೆ. ಮತ್ತು ಅಲ್ಲಿ ಯಾರಿಗೆ ಕೊಡಬೇಕೆಂದು ಕೂಡಾ ತಿಳಿಸಿ ಆ ವ್ಯಕ್ತಿಯ ಫೋನ್ ನಂಬರ್ ಕೊಟ್ಟಿದ್ದಾನೆ. ಜುಬೈಲ್‌ಗೆ ಕೇಬಲ್‌ಗಳನ್ನು ತಂದುಅಲ್ಲಿ ಕಾದು ನಿಂತಿದ್ದ ತಾಜ್‌ಬಕಂದರ್‌ನನ್ನು ಕಂಟೈರ್‌ಗೆ ಹತ್ತಿಸಿ ತಿಳಿಸಿದ ಕಂಪೆನಿಗೆಕೊಂಡು ಹೋಗಿ ಕೊಟ್ಟಾಗ ಅವರು ಅದನ್ನು ಖರೀದಿಸಿಲ್ಲ. ಬದಲಾಗಿ ಪೊಲೀಸರಿಗೆ ತಿಳಿಸಿದ್ದಾರೆ.ಪೊಲೀಸರುಬಂದು ತಪಾಸಣೆ ನಡೆಸಿದಾಗ ಕಂಟೈನರ್ ತುಂಬ ಕೇಬಲ್ ಇರುವುದುಪತ್ತೆಯಾಗಿದೆ.
ವಿವರವಾಗಿ ಪ್ರಶ್ನಿಸಿದ್ದಾಗ ಕದ್ದ ಮಾಲನ್ನು ಜುಬೈಲ್‌ನಲ್ಲಿಮಾರಾಲು ಇವರು ಯತ್ನಿಸಿದ್ದಾರೆ ಎಂದು ತಿಳಿಯಿತು. ಜುಬೈಲ್ ಪೊಲೀಸರು ತಿಳಿಸಿದ ಮಾಹಿತಿಯಂತೆ, ಇಕ್ರಾರ್ ಮತ್ತು ಆತನ ತಂಡವನ್ನು ರಿಯಾದ್ ಪೊಲೀಸರುಬಂಧಿಸಿದ್ದಾರೆ. ರಿಯಾದ್‌ನ ಒಂದು ಕಂಪೆನಿಗೆ ಜಿದ್ದಾ ಬಂದರಿನಿಂದ ಬರುವ ಕೇಬಲ್‌ಗಳನ್ನು ಕಂಟೈನರ್ ಸಹಿತ ಕದ್ದು ಮಾರುವುದು ಇವರ ಕೆಲಸವಾಗಿದೆ. ಇದೇ ಕಂಪೆನಿಯ ಎರಡು ಲೋಡ್ ಕೇಬಲ್ ಈ ಹಿಂದೆ ಕದ್ದು ಹೋಗಿತ್ತು.