​ಹಿಂದಿ ಭಾಷಿಕ ಉ.ಪ್ರದೇಶದಲ್ಲಿ ಶೇ.30 ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣ

Update: 2017-06-11 14:15 GMT

 ಲಕ್ನೋ,ಜೂ.11: ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಮುಖವಾಗಿರುವ ಉತ್ತರ ಪ್ರದೇಶದ ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಿದ್ದು, ಹಿಂದಿ ಭಾಷಾ ವಿಷಯದಲ್ಲಿ ಶೇ.30ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪ್ರೌಢಶಾಲಾ ಪರೀಕ್ಷೆಯಲ್ಲಿ ಶೇ.81ರಷ್ಟು ವಿದ್ಯಾರ್ಥಿಗಳು ಹಿಂದಿ ಭಾಷಾ ವಿಷಯದಲ್ಲಿ ತೇರ್ಗಡೆಯಾಗಿದ್ದರೆ, ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಇವರ ಪ್ರಮಾಣ ಶೇ.89ರಷ್ಟಾಗಿದೆ.

ಈ ಪೈಕಿ ಹೆಚ್ಚಿನವರ ಮಾತೃಭಾಷೆ ಹಿಂದಿ ಎನ್ನುವದು ಇಲ್ಲಿ ಗಮನಾರ್ಹವಾಗಿದೆ. ಇದೇ ವೇಳೆ ಹೈಸ್ಕೂಲ್ ಮಟ್ಟದಲ್ಲಿ ಬಾಂಗ್ಲಾ ಭಾಷೆಯಲ್ಲಿ ಮತ್ತು ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಸಿಂಧಿ,ಮಲಯಾಳಂ,ನೇಪಾಳಿ ಮತ್ತು ಬಾಂಗ್ಲಾ ಸೇರಿದಂತೆ ಇತರ ಭಾಷೆಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News