ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದ ವಿಜಯ್ ಮಲ್ಯ: ಭಾರತೀಯ ಪ್ರೇಕ್ಷಕರು ಸ್ವಾಗತಿಸಿದ್ದು ಹೇಗೆ ಗೊತ್ತೇ?

Update: 2017-06-11 14:51 GMT

ಲಂಡನ್, ಜೂ.11: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಉದ್ಯಮಿ ವಿಜಯ್ ಮಲ್ಯ ತೀವ್ರ ಮುಜುಗರಕ್ಕೊಳಗಾದರು. ಮಲ್ಯ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಲೇ ಕೆಲ ವೀಕ್ಷಕರು “ಚೋರ್ ಚೋರ್ (ಕಳ್ಳ, ಕಳ್ಳ) ಎಂದು ಕೂಗಿದರು.

ಭಾರತೀಯ ಪ್ರೇಕ್ಷಕರ ಬಳಿಯಿಂದ ತುಸು ವೇಗದಲ್ಲೇ ಮಲ್ಯ ಸಾಗಿದರಾದರೂ ಕೆಲವರು, “ಕಳ್ಳ ಹೋಗುತ್ತಿದ್ದಾನೆ. ಕಳ್ಳ, ಕಳ್ಳ ಎಂದು ಬೊಬ್ಬಿಟ್ಟರು.” ಇದರಿಂದ ಮಲ್ಯ ತೀವ್ರ ಮುಜುಗರಕ್ಕೊಳಗಾದರು.

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭವೂ ಮಲ್ಯ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ್ದರು. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಉತ್ತರಿಸಿದ್ದ ಮಲ್ಯ, “ಭಾರತ ತಂಡಕ್ಕೆ ಬೆಂಬಲ ಸೂಚಿಸಲು ಎಲ್ಲಾ ಪಂದ್ಯಗಳನ್ನೂ ವೀಕ್ಷಿಸಲಿದ್ದೇನೆ” ಎಂದು ಟ್ವೀಟ್ ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ವಿರಾಟ್ ಕೊಹ್ಲಿ ಚಾರಿಟಿ ಫೌಂಡೇಶನ್ ನ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಭಾಗವಹಿಸಿದ್ದು, ಇದರಿಂದ ವಿಚಲಿತರಾದ ಭಾರತೀಯ ಆಟಗಾರರು ಕಾರ್ಯಕ್ರಮದಿಂದ ಬೇಗನೇ ನಿರ್ಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News