ಫಳ್ನೀರ್: ವಾಣಿಜ್ಯ ಸಮುಚ್ಚಯದಲ್ಲಿ ಕೃತಕ ನೆರೆ; ಬಾಗಿಲು ಮುಚ್ಚಿದ 13 ಅಂಗಡಿಗಳು

Update: 2017-06-12 08:47 GMT

ಮಂಗಳೂರು, ಜೂ.12: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ನಗರದ ಫಳ್ನೀರ್ ರಸ್ತೆಯಲ್ಲಿರುವ ಯುನಿಟಿ ಆಸ್ಪತ್ರೆ ಎದುರಿನ ‘ವೆಸ್ಟ್ ಗೇಟ್ ಟರ್ಮಿನಸ್’ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಕೃತಕ ನೆರೆ ಸಷ್ಟಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಬೆಳಗ್ಗೆಯಿಂದಲೇ ಕಟ್ಟಡದ ನೆಲ ಅಂತಸ್ತಿನಲ್ಲಿ ಕೃತಕ ನೆರೆ ಕಾಣಿಸಿಕೊಂಡಿದ್ದು, ಅಂಗಡಿಯ ಮಾಲಕರು ತಮ್ಮ ಅಗಂಡಿಗಳನ್ನು ತೆರೆಯಲು ಸಾಧ್ಯವಾಗಿಲ್ಲ. ಒಳಚರಂಡಿಯಲ್ಲಿರುವ ನೀರು ತುಂಬಿ ಹರಿದಿರುವುದರಿಂದ ಕಟ್ಟಡದೊಳಗೂ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೊಬೈಲ್ ಅಂಗಡಿಗಳು, ಮೇಡಿಕಲ್ ಶಾಪ್, ಸೆಲೂನ್, ಜ್ಯೂಸ್ ಅಂಗಡಿ, ರೆಸ್ಟೋರೆಂಟ್ ಮೊದಲಾದವರು ನೆಲ ಅಂತಸ್ತಿನಲ್ಲಿರುವ 13 ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಸ್ಥಳಕ್ಕೆ ಮನಪಾ ಮೇಯರ್ ಕವಿತಾ ಸನಿಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News