ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ: ಪಾಕ್ ಪ್ರಜೆಗೆ ಮರಣದಂಡನೆ

Update: 2017-06-12 14:41 GMT

ಲಾಹೋರ್,ಜೂ.12: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ಬರಹವನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಶಿಯಾ ಸಮುದಾಯಕ್ಕೆ ಸೇರಿದ ಪ್ರಜೆಯೊಬ್ಬನಿಗೆ ಮರಣದಂಡನೆಯನ್ನು ಘೋಷಿಸಿದೆ.

ಪಾಕಿಸ್ತಾನವು ಸೈಬರ್ ಅಪರಾಧಳಿಗೆ ಸಂಬಂಧಿಸಿ ಈವರೆಗೆ ಪ್ರಕಟಿಸಿದ ಅತ್ಯಂತ ಕಠಿಣವಾದ ಶಿಕ್ಷೆ ಇದಾಗಿದೆಯೆನ್ನಲಾಗಿದೆ. ಧರ್ಮನಿಂದನೆ ಪ್ರಕರಣಗಳಲ್ಲಿ ಈವರೆಗೆ ಪಾಕ್ ನ್ಯಾಯಾಲಯವು ಯಾವುದೇ ವ್ಯಕ್ತಿಗೂ ಮರಣದಂಡನೆ ವಿಧಿಸಿರಲಿಲ್ಲ.

 ಓಕಾರಾ ಪಟ್ಟಣದ ನಿವಾಸಿ ರಾಝಾ ಎಂಬಾಂತ ತನ್ನ ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ಬರಹವನ್ನು ಪ್ರಕಟಿಸಿದ್ದು, ಅದನ್ನು ಆತ ತನ್ನ ಸಹದ್ಯೋಗಿಗಳ ಜೊತೆ ಹಂಚಿಕೊಂಡಿದ್ದ. ಈ ಬಗ್ಗೆ ಆತನ ಸಹದ್ಯೋಗಿಗಳು ನೀಡಿದ ದೂರಿನ ಮೇರೆಗೆ ಕಳೆದ ವರ್ಷ ಆತನನ್ನು ಬಹವಾಲ್‌ಪುರ್‌ನಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News