ಲಂಡನ್: 3 ಸಾವಿರ ಗುಲಾಬಿ ವಿತರಿಸಿ ಸೌಹಾರ್ದತೆ ಸಾರಿದ ಮುಸ್ಲಿಂ ಸಂಘಟನೆ

Update: 2017-06-12 16:57 GMT

 ಲಂಡನ್,ಜೂ.12: ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿ ಘಟನೆಗಳ ಹಿನ್ನೆಲೆಯಲ್ಲಿ ಬ್ರಿಟಿಶ್ ಜನತೆಯಲ್ಲಿ ಸೌಹಾರ್ದ ಹಾಗೂ ಸಾಮರಸ್ಯವನ್ನು ನಿವಾರಿಸುವ ಪ್ರಯತ್ನವಾಗಿ, ಬ್ರಿಟನ್‌ನ ಮುಸ್ಲಿಮರ ಸಂಘಟನೆಯೊಂದು ಲಂಡನ್ ಸೇತುವೆಯಲ್ಲಿ 3 ಸಾವಿರ ಗುಲಾಬಿ ಹೂವುಗಳನ್ನು ದಾರಿಹೋಕರು ಹಾಗೂ ಪ್ರವಾಸಿಗರಿಗೆ ವಿತರಿಸುವ ಮೂಲಕ ಪ್ರೀತಿ, ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.

ಕಳೆದ ವಾರಾಂತ್ಯದಲ್ಲಿ ನಡೆದ ಭಯಾನಕ ಘಟನೆಗಳ ಬಳಿಕ, ಆ ದಾಳಿಯಲ್ಲಿ ಸಂತ್ರಸ್ತರಾದ ಸಮುದಾಯಗಳಿಗೆ ನಾವು ಪ್ರೀತಿಯನ್ನು ಈ ಮೂಲಕ ಸಾಂಕೇತವಾಗಿ ವ್ಯಕ್ತಪಡಿಸುತ್ತಿದ್ದೇವೆ ಎಂದು ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಝಕಿಯಾ ಬಸ್ಸಾವು ತಿಳಿಸಿದ್ದಾರೆ.

 ಮ್ಯಾಂಚೆಸ್ಟರ್‌ನಲ್ಲಿ ನಡೆದ ಸಂಗೀತಗೋಷ್ಠಿಯೊಂದರಲ್ಲಿ ನಡೆದ ಆತ್ಮಹತ್ಚಾ ಬಾಂಬ್ ದಾಳಿಯಲ್ಲಿ 22 ಮಂದಿ ಮೃತಪಟ್ಟ ಘಟನೆಯ ಕೆಲವೇ ದಿನಗಳಬಳಿಕ ಲಂಡನ್‌ನ ಸೇತುವೆಯ ಬಳಿಕ ಮೂವರು ಭಯೋತ್ಪಾದಕರು ಪಾದಚಾರಿಗಳ ಮೇಲೆ ವ್ಯಾನ್ ಹರಿಸಿ ಹಾಗೂ ಮಾರಕಾಸ್ತ್ರಗಳಿಂದ ಮನಬಂದಂತೆ ಇರಿದು ಎಂಟು ಮಂದಿಯನ್ನು ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News