ಮಿಶಿಗನ್: ಉಗ್ರನೆಂದು ನಿಂದಿಸಿ ಭಾರತೀಯನಿಗೆ ಗುಂಡೇಟು

Update: 2017-06-12 17:57 GMT

ನ್ಯೂಯಾರ್ಕ್, ಜೂ.12: ಜನಾಂಗೀಯ ದ್ವೇಷದ ಘಟನೆಯೊಂದರಲ್ಲಿ, ಭಾರತೀಯ ಮೂಲದ ಅಂಗಡಿ ಗುಮಾಸ್ತನನ್ನು, ಅಪರಿಚಿತನೊಬ್ಬ ‘ಐಸಿಸ್ ಭಯೋತ್ಪಾದಕ’ನೆಂದು ನಿಂದಿಸಿ, ಗುಂಡಿಕ್ಕಿ ಗಾಯಗೊಳಿಸಿದ ಅಘಾತಕಾರಿ ಘಟನೆ ಅಮೆರಿಕ ಮಿಶಿಗನ್ ನಗರದಲ್ಲಿ ಶನಿವಾರ ನಡೆದಿದೆ.

   ಅಪರಿಚಿತ ವ್ಯಕ್ತಿಯು, ಬಂದೂಕು ತೋರಿಸಿ ಅಂಗಡಿಯ ಗುಮಾಸ್ತನಿಂದ ಹಣ ನೀಡುವಂತೆ ಒತ್ತಾಯಿಸಿದ. ಆಗ ಗುಮಾಸ್ತನು, ದುಷ್ಕರ್ಮಿಯ ಕೈಯಿಂದ ಬಂದೂಕನ್ನು ಕಿತ್ತುಕೊಳ್ಳಲು ಯತ್ನಿಸಿದ. ಆಗ ನಡೆದ ಜಟಾಪಟಿಯಲ್ಲಿ ಅಪರಿಚಿತನು ಗುಮಾಸ್ತನ ಕೆನ್ನೆಗೆ ಗುಂಡಿಕ್ಕಿದನೆಂದು, ಭಾರತೀಯ ಮೂಲದ ಸಿಖ್ಖ್ ಆಗಿರುವ ಅಂಗಡಿಯ ಮಾಲಕ ಇಂದರ್‌ಜಿತ್‌ಸಿಂಗ್ ಅವರ ಪುತ್ರಿ ಗುರ್ಲಿನ್ ಕೌರ್ ತಿಳಿಸಿದ್ದಾರೆ.

ಗಾಯಾಳು ಉದ್ಯೋಗಿಯ ಹೆಸರನ್ನು ಈವರೆಗೆ ಪೊಲೀಸರು ಬಹಿರಂಗಪಡಿಸಿಲ್ಲ ಹಾಗೂ ಆತ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News