ನಿವೃತ್ತರಾದ ನ್ಯಾ.ಕರ್ಣನ್

Update: 2017-06-12 17:58 GMT

ಹೊಸದಿಲ್ಲಿ, ಜೂ.12: ಕೋಲ್ಕತಾ ಹೈಕೋರ್ಟ್‌ನ ವಿವಾದಾಸ್ಪದ ನ್ಯಾಯಾಧೀಶ ಸಿ.ಎಸ್.ಕರ್ಣನ್ ತಮ್ಮ ಹುದ್ದೆಯಿಂದ ಸೋಮವಾರ ನಿವೃತ್ತರಾಗಿದ್ದಾರೆ.

  ನ್ಯಾಯಾಂಗ ನಿಂದನೆ ಆರೋಪದಲ್ಲಿ ಸುಪ್ರೀಂಕೋರ್ಟ್‌ನಿಂದ ಆರು ತಿಂಗಳ ಶಿಕ್ಷೆಗೆ ಒಳಗಾಗಿದ್ದ ನ್ಯಾ.ಕರ್ಣನ್, ಮೇ 9ರಿಂದ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಇವರನ್ನು ಬಂಧಿಸಲು ಪೊಲೀಸರು ಹುಡುಕಾಟ ಮುಂದುವರಿಸುತ್ತಿರುವಂತೆಯೇ ನಿವೃತ್ತಿ ಘೋಷಿಸಿದ್ದಾರೆ. ಆದರೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗೆ ಸಂಪ್ರದಾಯದಂತೆ ನಡೆಯಬೇಕಿದ್ದ ಬೀಳ್ಕೊಡುಗೆ ಸಮಾರಂಭ ಕರ್ಣನ್ ಅನುಪಸ್ಥಿತಿಯ ಕಾರಣ ನಡೆಯಲಿಲ್ಲ ಎಂದು ಕೋಲ್ಕತಾ ಹೈಕೋರ್ಟ್‌ನ ಪ್ರಧಾನ ರಿಜಿಸ್ಟ್ರಾರ್ ಸುಗತೊ ಮಜೂಮ್ದಾರ್ ತಿಳಿಸಿದ್ದಾರೆ.

ನ್ಯಾ.ಕರ್ಣನ್ ಅವರಿಗೆ ನಿವೃತ್ತಿಯ ಬಳಿಕ ಸಿಗಬೇಕಾದ ಸವಲತ್ತುಗಳು ಕಾನೂನಿನ ಪ್ರಕಾರ ದೊರೆಯುತ್ತದೆ ಎಂದು ಅವರು ತಿಳಿಸಿದರು.

ನ್ಯಾ.ಕರ್ಣನ್ ಇಲ್ಲಿ ಉಪಸ್ಥಿತರಿದ್ದರೆ ಅವರಿಗೆ ಆಹ್ವಾನ ನೀಡಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸುತ್ತಿದ್ದೆವು. ಆದರೆ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲದ ಕಾರಣ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿಲ್ಲ ಎಂದು ಕೋಲ್ಕತಾ ವಕೀಲರ ಸಂಘದ ಅಧ್ಯಕ್ಷ ಸುಂಜನ್ ದಾಸ್‌ಗುಪ್ತ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News