ಕೇರಳದಲ್ಲಿ ಜೂ.24ಕ್ಕೆ ಪೆಟ್ರೋಲ್ ಬಂಕ್ ಬಂದ್
Update: 2017-06-13 16:25 IST
ಕೊಚ್ಚಿ,ಜೂ.13: ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿದಿವಸ ನಿರ್ಣಯಿಸುವ ತೈಲ ಕಂಪೆನಿಗಳ ನಿರ್ಧಾರವನ್ನು ಹಿಂಪಡೆಯಬೇಕು, ಸರಕಾರವೇ ದರ ನಿರ್ಣಯ ಮಾಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಈ ತಿಂಗಳು 24ರಿಂದ ಅನಿರ್ದಿಷ್ಟಕಾಲ ಪ್ರತಿಭಟನೆ ನಡೆಸಲಾಗುವುದು ಎಂದು ಕೇರಳ ಸ್ಟೇಟ್ ಪೆಟ್ರೋಲಿಯಂ ಟ್ರೇಡರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ದಿನಾಲೂ ಪೆಟ್ರೋಲ್ ದರ ಪರಿಷ್ಕರಣೆ ಅಸ್ತಿತ್ವಕ್ಕೆ ಬರುವ ಹದಿನಾರನೆ ತಾರೀಕಿಗೆ ಉತ್ಪನ್ನಗಳನ್ನು ಖರೀದಿಸದೆ ಮತ್ತು ಮಾರದೆ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಿ ಸಾಂಕೇತಿಕ ಮುಷ್ಕರ ನಡೆಸಲಾಗುವುದು ಎಂದು ಅಸೋಶಿಯೇಶ್‌ನ ಪದಾಧಿಕಾರಿಗಳಾದ ಎಂ.ಎಂ. ಬಶೀರ್ ಮತ್ತು ಆರ್. ಶಬರೀನಾಥ ಜಂಟಿಯಾಗಿ ತಿಳಿಸಿದ್ದಾರೆ.