ಒಮನ್: ಹಿಟ್ ಆ್ಯಂಡ್ ರಾಬ್ ತಂಡ ಪೋಲಿಸ್ ಬಲೆಗೆ

Update: 2017-06-14 11:51 GMT

ಮಸ್ಕತ್,ಜೂ. 14: ಬ್ಯಾಂಕಿನಿಂದ ಹಣವನ್ನು ಕೊಂಡೊಯ್ಯುವವರನ್ನು ಗುರಿಯಾಗಿಟ್ಟು ದೋಚುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಈತಂಡದಲ್ಲಿ ಓರ್ವ ಬ್ಯಾಂಕ್ ನೌಕರ ಕೂಡಾ ಇದ್ದಾನೆ. ಹಣ ಕೊಂಡುಹೋಗುವವರ ವಾಹನದ ಹಿಂಭಾಗಕ್ಕೆ ತಮ್ಮ ವಾಹನವನ್ನು ಢಿಕ್ಕಿಹೊಡೆದು ದೋಚುವುದು ಈತಂಡದ ಕೆಲಸವಾಗಿದೆ ಎಂದುಪೊಲೀಸರು ಹೇಳಿದ್ದಾರೆ.ಬೋಷರ್‌ವಿಲಾಯ ಎಂಬಲ್ಲಿಂದ 88,000 ರಿಯಾಲ್‌ಗೂ ಅಧಿಕ ಹಣವನ್ನು ದೋಚಿಸಿದ ಪ್ರಕರಣದಲ್ಲಿ ಇವರನ್ನು ಮಸ್ಕತ್ ಪೊಲೀಸ್‌ನ ಅಧೀನದ ಅಪರಾಧ ತನಿಖಾ ದಳ ವಶಕ್ಕೆ ಪಡೆದಿದೆ. ವ್ಯಕ್ತಿಗಳುದೊಡ್ಡ ಮೊತ್ತ ಡ್ರಾ ಮಾಡುವುದನ್ನು ತಂಡದ ಇತರ ಇಬ್ಬರಿಗೆ ತಿಳಿಸುತ್ತಿದ್ದನೆಂದು ಪೊಲೀಸರು ಹೇಳಿದ್ದಾರೆ.

ಇವರು ದೋಚಲು ಒಂದೇ ವಿಧಾನವನ್ನು ಅನುಸರಿಸುತ್ತಿರಲಿಲ್ಲ. ಹಣದೊಂದಿಗೆ ಹೋಗುತ್ತಿರುವವರು ಆರೋಪಿಗಳು ತಮ್ಮ ವಾಹನದಲ್ಲಿಹಿಂಬಾಲಿಸಿ ತಡೆದು ನಿಲ್ಲಿಸಿ ಹೊಡೆದು ಹಣ ದೋಚುತ್ತಿದ್ದರು. ತಮಗೆಸೂಕ್ತ ಎಂದು ಅನಿಸಿದ ಸ್ಥಳಗಳಲ್ಲಿ ಅವರು ತಮ್ಮ ವಾಹನವನ್ನು ಢಿಕ್ಕಿಹೊಡೆಯುತ್ತಿದ್ದರು. ಅಪಘಾತ ಎಂದು ಕಾರಿನಿಂದ ಇಳಿದಕೂಡಲೆ ಹಲ್ಲೆಎಸಗಿ ಹಣವನ್ನು ದೋಚುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನುಮುಂದೆ ದೊಡ್ಡಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸುವವರು ಸೂಕ್ತ ಮುಂಜಾಗೃತೆ ವಹಿಸಬೇಕೆಂದು ರಾಯಲ್ ಒಮನ್ ಪೊಲೀಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News