ಪಾಕಿಸ್ತಾನ ಫೈನಲ್ ಪ್ರವೇಶ
Update: 2017-06-14 21:49 IST
ಕಾರ್ಡಿಫ್, ಜೂ.14: ಆತಿಥೇಯ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ 8ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ.
ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 212ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ ಇನ್ನೂ77 ಎಸೆತಗಳು ಬಾಕಿ ಇರುವಂತೆ 2ವಿಕೆಟ್ ನಷ್ಟದಲ್ಲಿ 215 ರನ್ ಗಳಿಸಿ ಗೆಲುವಿನ ದಡ ಸೇರಿತು.
ಆರಂಭಿಕ ದಾಂಡಿಗರಾದ ಅಝರ್ ಅಲಿ 76 ರನ್(100ಎ, 5ಬೌ,1ಸಿ) ಫಾಖರ್ ಝಮಾನ್ 57 ರನ್(58ಎ, 7ಬೌ,1ಸಿ), ಬಾಬರ್ ಅಝಮ್ ಔಟಾಗದೆ 38 ರನ್ ಮತ್ತು ಮುಹಮ್ಮದ್ ಹಫೀಝ್ ಔಟಾಗದೆ 31 ರನ್ ಗಳಿಸಿದರು.
ಆರಂಭಿಕ ದಾಂಡಿಗರಾದ ಅಝರ್ ಅಲಿ ಮತ್ತು ಫಾಖರ್ ಝಮಾನ್ ಮೊದಲ ವಿಕೆಟ್‌ಗೆ 118 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಇದಕ್ಕೂ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 49.5ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟಾಗಿತ್ತು.