ಲಂಡನ್ ಬೆಂಕಿ ಅನಾಹುತ: ಮೃತರ ಸಂಖ್ಯೆ 17ಕ್ಕೆ
Update: 2017-06-15 19:21 IST
ಲಂಡನ್, ಜೂ. 15: ಲಂಡನ್‌ನ 24 ಮಹಡಿಯ ಗ್ರೆನ್‌ಫೆಲ್ ಟವರ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ.
ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಭಾರೀ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ. ಹಾಗಾಗಿ, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಪ್ರಧಾನಿ ತೆರೇಸಾ ಮೇ ಭೇಟಿ ನೀಡಿ ಅಗ್ನಿಶಾಮಕ ಅಧಿಕಾರಿಗಳು ಮತ್ತು ಪೊಲೀಸರನ್ನು ಭೇಟಿಯಾದರು.
ಆದರೆ, ಸಂತ್ರಸ್ತರನ್ನು ಭೇಟಿಯಾಗದೆ ಹಿಂದಿರುಗಿರುವುದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.