×
Ad

ಸೊಮಾಲಿಯ: ರೆಸ್ಟೋರೆಂಟ್ ಮೇಲೆ ದಾಳಿ; 31 ಸಾವು

Update: 2017-06-15 19:52 IST

ಮೊಗಾದಿಶು, ಜೂ. 15: ಸೊಮಾಲಿಯ ರಾಜಧಾನಿ ಮೊಗಾದಿಶುವಿನ ರೆಸ್ಟೋರೆಂಟ್ ಒಂದರ ಒಳಗೆ ಗುರುವಾರ ಸೈನಿಕರ ವೇಷದಲ್ಲಿ ನುಗ್ಗಿರುವ ಬಂದೂಕುಧಾರಿಗಳು ಹಲವಾರು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಾಳಿಯಲ್ಲಿ 31 ಮಂದಿ ಹತರಾಗಿದ್ದಾರೆ. ಭಯೋತ್ಪಾದಕರು ಹೆಚ್ಚಿನವರನ್ನು ಹತ್ತಿರದಿಂದ ಗುಂಡು ಹಾರಿಸಿ ಕೊಂದಿದ್ದಾರೆ.
ಅಲ್-ಶಬಾಬ್ ಎಂಬ ಭಯೋತ್ಪಾದಕ ಗುಂಪು ದಾಳಿಯ ಹೊಣೆ ಹೊತ್ತಿದೆ.

ಇಬ್ಬರು ಬಂದೂಕುಧಾರಿಗಳನ್ನೂ ಹೊಡೆದುರುಳಿಸಲಾಗಿದೆ. ಹತ್ತು ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಐವರು ಬಂದೂಕುಧಾರಿಗಳು ಇನ್ನೋ ಒಳಗಿದ್ದಾರೆ ಎಂದು ಕ್ಯಾಪ್ಟನ್ ಮುಹಮ್ಮದ್ ಹುಸೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News