ಚೀನಾ: ಶಾಲೆಯಲ್ಲಿ ಸ್ಫೋಟ; 7 ಸಾವು
Update: 2017-06-15 20:01 IST
ಬೀಜಿಂಗ್, ಜೂ. 15: ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದ ಫೆಂಗ್‌ಕ್ಸಿಯಾನ್ ಕೌಂಟಿಯ ಕಿಂಡರ್‌ಗಾರ್ಟನ್ ಶಾಲೆಯಲ್ಲಿ ಗುರುವಾರ ನಡೆದ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 59 ಮಂದಿ ಗಾಯಗೊಂಡಿದ್ದಾರೆ.
ಮಕ್ಕಳು ಶಾಲೆಯಿಂದ ಹೊರಹೋಗುತ್ತಿದ್ದಾಗ ಸಂಜೆ ಸುಮಾರು 4:50ಕ್ಕೆ ಶಾಲೆಯ ದ್ವಾರದಲ್ಲಿ ಸ್ಫೋಟ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದರು.
ಸ್ಫೋಟದ ಕಾರಣ ತಿಳಿದುಬಂದಿಲ್ಲ.