ಮೂಡುಬಿದಿರೆ: ಬ್ರಾಂಡ್ ಸೆಂಟರ್, ಬುರ್ಖಾ ಫ್ಯಾಶನ್ ಉದ್ಘಾಟನೆ

Update: 2017-06-16 06:42 GMT

ಮೂಡುಬಿದಿರೆ, ಜೂ.16: ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಎದುರಿನ ಸಾಯಿ ವೈಟ್ ಫೀಲ್ಡ್ ಆರ್ಕೆಡ್‌ನಲ್ಲಿ ಬ್ರಾಂಡ್ ಸೆಂಟರ್ ಹಾಗೂ ಬುರ್ಖಾ ಫ್ಯಾಶನ್ ಸಂಸ್ಥೆಯು ಶುಕ್ರವಾರ ಉದ್ಘಾಟನೆಗೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೂಡುಬಿದಿರೆಯಲ್ಲಿ ಆಳ್ವಾಸ್ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳ ಸುಮಾರು 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ವಿಪುಲವಾದ ಮಾರುಕಟ್ಟೆ ಅವಕಾಶಗಳಿವೆ. ವಿದ್ಯಾಗಿರಿಯಲ್ಲಿ ಆರಂಭಿಸಿರುವ ಈ ಸಂಸ್ಥೆಯಿಂದ ಮೂಡುಬಿದಿರೆ ಆಸುಪಾಸಿನ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿ. ಸಂಸ್ಥೆಯ ಮಾಲಕರ ಹಲವು ವರ್ಷಗಳ ಉದ್ಯಮ ಅನುಭವದಿಂದ ಯಶಸ್ಸು ಖಂಡಿತ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಮೂಡುಬಿದಿರೆ ಶ್ರೀ ದೇವಿಕೃಪಾ ಡೆವಲಪರ್ಸ್‌ನ ಜಯರಾಮ ಎಂ. ಶೆಟ್ಟಿ, ಮೂಡುಬಿದಿರೆ ಮದ್ರಸ ಮ್ಯಾನೇಜ್‌ಮೆಂಟ್ ರೇಂಜ್‌ನ ಅಧ್ಯಕ್ಷ ಅಬ್ದುಲ್ ರಹಿಮಾನ್, ಬುರ್ಖಾ ಫ್ಯಾಶನ್ ಮಾಲಕ ರಿಯಾಝ್, ಶೂ ಪ್ಯಾಲೇಸ್ ಮಾಲಕ ಅಬ್ದುಲ್ ರಹಿಮಾನ್, ಬ್ರಾಂಡ್ ಸೆಂಟರ್‌ನ ಮುಹಮ್ಮದ್ ನೂರಿಶ್ ಉಪಸ್ಥಿತರಿದ್ದರು.

ಬುರ್ಖಾ ಫ್ಯಾಶನ್ ಸಂಸ್ಥೆಯು 17 ವರ್ಷಗಳಿಂದ ವಿವಿದ ಪ್ರಮುಖ ನಗರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರಿಗೆ ಬುರ್ಖಾ ಆಯ್ಕೆಯಲ್ಲಿ ಗಮನ ಸೆಳೆದ ಸಂಸ್ಥೆಯಾಗಿದೆ. ಮೂಡುಬಿದಿರೆಯಲ್ಲಿ ಸಂಸ್ಥೆ ಆರಂಭಗೊಂಡಿದ್ದು, ಈ ಸಂಸ್ಥೆಯ ಜೊತೆಗೆ ಬ್ರಾಂಡ್ ಸೆಂಟರ್‌ನಲ್ಲಿ ಗುಣಮಟ್ಟದ ಬಟ್ಟೆಬರೆಗಳು ಹಾಗೂ ಪಾದರಕ್ಷೆಗಳ ಶೋರೂಮ್ ಅನ್ನು ಒಳಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News