ಬ್ಯಾಂಕ್ ಖಾತೆ ತೆರೆಯಲು, 50 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿಗೆ ಆಧಾರ್ ಕಡ್ಡಾಯ
Update: 2017-06-16 16:33 IST
ಹೊಸದಿಲ್ಲಿ, ಜೂ.16: ಬ್ಯಾಂಕ್ ಖಾತೆಯನ್ನು ತೆರೆಯಲು ಹಾಗೂ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಖಾತೆ ಹೊಂದಿರುವವರು 2017ರ ಡಿಸೆಂಬರ್ 31ರ ಮೊದಲು ಆಧಾರ್ ಸಂಖ್ಯೆಯನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಖಾತೆಯ ವಹಿವಾಟನ್ನು ನಿಲ್ಲಿಸಲಾಗುವುದು ಎಂದು ಆದಾಯ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.