ಕಾಶ್ಮೀರ: ಭಯೋತ್ಪಾದಕರ ದಾಳಿಗೆ 6 ಪೊಲೀಸರು ಮೃತ್ಯು

Update: 2017-06-16 14:57 GMT

ಶ್ರೀನಗರ, ಜೂ.16: ಪೊಲೀಸ್ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಆರು ಮಂದಿ ಪೊಲೀಸರು ಮೃತಪಟ್ಟ ಘಟನೆ ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಎಂಬಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿ ಫಿರೋಝ್ ಹಾಗೂ ಇತರ ಸಿಬ್ಬಂದಿ ವಾಹನವೊಂದರಲ್ಲಿ ತೆರಳುತ್ತಿದ್ದ ಸಂದರ್ಭ ಸಶಸ್ತ್ರಧಾರಿಗಳಾಗಿ ಆಗಮಿಸಿದ ಭಯೋತ್ಪಾದಕರ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿತು. ದಾಳಿಯಿಂದಾಗಿ 6 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ನಡೆದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕನ ಎನ್ ಕೌಂಟರ್ ಗೆ ಸಂಬಂಧಿಸಿದ ಪ್ರತೀಕಾರ ಇದಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News