ಅಮೆರಿಕದಿಂದ ಅಫ್ಘಾನ್ ಗೆ ಹೆಚ್ಚುವರಿ 4,000 ಸೈನಿಕರು

Update: 2017-06-16 16:18 GMT

ವಾಶಿಂಗ್ಟನ್, ಜೂ. 16: ಅಮೆರಿಕವು ಅಫ್ಘಾನಿಸ್ತಾನಕ್ಕೆ ಹೆಚ್ಚುವರಿ 4,000 ಸೈನಕರನ್ನು ಕಳುಹಿಸಲಿದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

ಯುದ್ಧಗ್ರಸ್ತ ದೇಶದಲ್ಲಿ ತಾಲಿಬಾನ್ ಉಗ್ರರು ದಿನೇ ದಿನೇ ಪ್ರಾಬಲ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ತೆಗೆದುಕೊಂಡ ಈ ಕ್ರಮ ಮಹತ್ವದ್ದಾಗಿದೆ.

ಇದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ, ಅಮೆರಿಕ ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತಿರುವ ಅತಿ ದೊಡ್ಡ ಸೇನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News