ರಾಜಸ್ತಾನದಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಹಲ್ಲೆ

Update: 2017-06-16 17:40 GMT

ನಾಗಪುರ, ಜೂ.16: ಮಾನಸಿಕ ಅಸ್ವಸ್ಥೆಯೋರ್ವಳ ಮೇಲೆ ರಬ್ಬರ್ ಪೈಪಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು ಕೆಲವರು ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಳಿಕ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥೆ ಮಹಿಳೆ ತಮ್ಮ ಹೊಲಕ್ಕೆ ಪ್ರವೇಶಿಸಿದ್ದನ್ನು ಕಂಡ ಇವರಿಬ್ಬರು, ಈಕೆ ಯಾವುದೋ ದುರುದ್ದೇಶದಿಂದ ತಮ್ಮ ಜಮೀನಿಗೆ ಪ್ರವೇಶಿಸಿದ್ದಾಳೆ ಎಂದು ಭಾವಿಸಿ ಆಕೆಯ ಮೇಲೆ ರಬ್ಬರ್ ಪೈಪಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ಮೇಘ್‌ವಾಲ್ ಮತ್ತು ಶ್ರವಣ್ ಮೇಘ್‌ವಾಲ್ ಎಂಬವರನ್ನು ಬಂಧಿಸಲಾಗಿದೆ .ಮುಸುಕುಧಾರಿಗಳಾದ ಆರೋಪಿಗಳು ಮಹಿಳೆಯನ್ನು ಒದ್ದು ರಬ್ಬರ್ ಪೈಪಿನಿಂದ ಥಳಿಸುತ್ತಿದ್ದಾಗ ಆಕೆ ನೋವಿನಿಂದ ಕಿರುಚುತ್ತಾ ಸಹಾಯಕ್ಕಾಗಿ ಮೊರೆಯಿಡುವ ದೃಶ್ಯವನ್ನು ಪ್ರಸಾರ ಮಾಡಲಾಗಿದೆ.

 ಸಂತ್ರಸ್ತ ಮಹಿಳೆಯನ್ನು ಪತ್ತೆಹಚ್ಚಿದ ಬಳಿಕ ಆಕೆಯ ಹೇಳಿಕೆ ಪಡೆದು ಆರೋಪಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಕಾರ್ಯ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News