×
Ad

ಸಾಹಸ ಪ್ರದರ್ಶಿಸಲು ಹೋಗಿ ಮೊಸಳೆಯ ಬಾಯಿಗೆ ತಲೆಕೊಟ್ಟ ಭೂಪ!

Update: 2017-06-17 16:29 IST

ಥಾಯ್ ಲ್ಯಾಂಡ್, ಜೂ.17: ಇಲ್ಲಿನ ಝೂ ಒಂದರಲ್ಲಿ ಮೊಸಳೆಯೊಂದಿಗೆ ಸಾಹಸ ಪ್ರದರ್ಶಿಸಲು ಮುಂದಾದ ವ್ಯಕ್ತಿಯೊಬ್ಬ ಮೊಸಳೆಯ ಬಾಯಿಗೆ ಸಿಕ್ಕಿದ ಘಟನೆ ನಡೆದಿದೆ. ಪ್ರವಾಸಿಗನೊಬ್ಬ ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಹಸ ಪ್ರದರ್ಶಿಸುವ ಸಲುವಾಗಿ ಪರಿಣಿತನೋರ್ವ ಮೊಸಳೆ ಬಾಯಿಯನ್ನು ತಡವುತ್ತಾ ತನ್ನ ತಲೆಯನ್ನು ಮೊಸಳೆಯ ಬಾಯಿಯ ನಡುವೆ ಇಟ್ಟಿದ್ದಾನೆ. ಆದರೆ ಈ ಸಂದರ್ಭ ಮೊಸಳೆ ಆತನ ತಲೆಯನ್ನು ಕಚ್ಚಿಹಿಡಿದು ನೆಲಕ್ಕೆ ಬಡಿದಿದೆ. ಅದೃಷ್ಟವಶಾತ್ ಆತನನ್ನು ಬಿಟ್ಟ ಮೊಸಳೆ ಮತ್ತೆ ನೀರಿಗಿಳಿದಿದೆ.

ಈ ದೃಶ್ಯಾವಳಿಯನ್ನು ಪ್ರವಾಸಿಗನೊಬ್ಬ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News