×
Ad

ರಾಷ್ಟ್ರಪತಿ ಚುನಾವಣಾ ಕಣದಲ್ಲಿ ನಾನಿಲ್ಲ: ಸುಷ್ಮಾ ಸ್ವರಾಜ್

Update: 2017-06-17 17:07 IST

ಹೊಸದಿಲ್ಲಿ, ಜೂ.17: ರಾಷ್ಟ್ರಪತಿ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿದ್ದೇನೆ ಎನ್ನುವ ಸುದ್ದಿಗಳನ್ನು ನಿರಾಕರಿಸಿರುವ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಇದು ಬರೀ ವದಂತಿ ಎಂದಿದ್ದಾರೆ.

ಕೇಂದ್ರ ಸರಕಾರವಾಗಲೀ ವಿಪಕ್ಷಗಳಾಗಲೀ ಇದುವರೆಗೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ನಡುವೆ ಸುಷ್ಮಾ ಸ್ವರಾಜ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿತ್ತು.

“ಇವೆಲ್ಲವೂ ವದಂತಿಯಷ್ಟೇ. ನಾನು ವಿದೇಶಾಂಗ ಸಚಿವೆಯಾಗಿದ್ದು, ನೀವು ಆಂತರಿಕ ವಿಷಯಗಳನ್ನು ಪ್ರಶ್ನಿಸುತ್ತಿದ್ದೀರಿ” ಎಂದು ಪತ್ರಕರ್ತರಿಗೆ ಅವರು ಉತ್ತರಿಸಿದರು. ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, 20ರಂದು ಮತಎಣಿಕೆ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News