ಉಪವಾಸದ ಸಂದರ್ಭ ಹಸಿವಿತ್ತಾದರೂ ಬೇರೆಯದೇ ರೀತಿಯ ಸಂತೋಷವಿತ್ತು

Update: 2017-06-17 12:27 GMT

ಭಾರತ ದೇಶವು ಸರ್ವಧರ್ಮ ಸಹಿಷ್ಣುತೆಗೆ ಹೆಸರಾದ ದೇಶ. ಜಗತ್ತಿನ ಯಾವ ರಾಷ್ಟ್ರಗಳಲ್ಲಿಯೂ ಇಲ್ಲದಷ್ಟು ಬೇರೆ ಬೇರೆ ಧರ್ಮಗಳು, ಆಚರಣೆಗಳು ಭಾರತದ ವೈಶಿಷ್ಟ್ಯ. ಎಲ್ಲಾ ಧರ್ಮಗಳಲ್ಲೂ ಉಪವಾಸವನ್ನು ಆಚರಿಸುತ್ತಾರೆ. ಆದರೆ ಮುಸ್ಲಿಮರ ರಮಝಾನ್ ಉಪವಾಸ ವಿಶಿಷ್ಠವಾದದ್ದು ಹಾಗೂ ಜಗತ್ತಿಗೆ ನೀಡಿದ ಒಂದು ಸಂದೇಶವಾಗಿದೆ. ಬಡವನ ಹಸಿವನ್ನು ಇತರರು ತಿಳಿದುಕೊಳ್ಳಲಿ ಎಂಬ ನಿಟ್ಟಿನಲ್ಲಿ ಆಚರಿಸಲಾಗುವ ರಮಝಾನ್ ಉಪವಾಸ ನಿಜಕ್ಕೂ ಸಾಮಾಜಿಕವಾದದ್ದು. 

ನಾನು ಸೌದಿ ಅರೇಬಿಯಾದಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿದ್ದೆ. ಅಲ್ಲಿ ರಮಝಾನನ್ನು ಕಟ್ಟುನಿಟ್ಟಿನಿಂದ ಆಚರಿಸಲಾಗುತ್ತಿತ್ತು. ರಮಝಾನ್ ತಿಂಗಳಲ್ಲಿ ಏನಾದರೂ ತಿಂದಲ್ಲಿ 16 ಛಡಿ ಏಟುಗಳ ಶಿಕ್ಷೆ ನೀಡಲಾಗುತ್ತಿತ್ತು. ನಾನೂ ಕೂಡಾ ಆ ಸಮಯದಲ್ಲಿ ನನ್ನ ಮುಸ್ಲಿಮ್ ಸ್ನೇಹಿತರೊಂದಿಗೆ ಉಪವಾಸ ಹಿಡಿಯುತ್ತಿದ್ದೆ. ರಮಝಾನ್ ತಿಂಗಳ ಉಪವಾಸ ನನಗೆ ಅಭ್ಯಾಸವಾಗಿತ್ತು. ಉಪವಾಸದ ಸಮಯದಲ್ಲಿ ಹಸಿವಾಗುತ್ತಿತ್ತಾದರೂ ಬೇರೆಯದೇ ರೀತಿಯ ಸಂತೋಷವಿತ್ತು. 

ಕಷ್ಟ ಮತ್ತು ಹಸಿವಿನ ಅರಿವನ್ನು ನಮ್ಮಲ್ಲಿ ಮೂಡಿಸುವಲ್ಲಿ ಉಪವಾಸ ಪ್ರಮುಖ ಪಾತ್ರ ವಹಿಸುತ್ತದೆ. ಉಪವಾಸ ಎಂದರೆ ದೇವರ ಸಮೀಪವಿರುವುದು. ದೇವರ ಸಮೀಪದಲ್ಲಿದ್ದು, ಸನ್ಮಾರ್ಗದತ್ತ ನಮ್ಮ ಬದುಕನ್ನು ಕೊಂಡೊಯ್ಯುವ ಸಮಯವಾಗಿದೆ ರಮಝಾನ್.

-ಕರುಣಾಕರ ನಾಯಕ್, ಛಾಯಾಚಿತ್ರಗ್ರಾಹಕರು, ಸ್ವಸ್ತಿಕ್ ಸ್ಟುಡಿಯೋ

Writer - ಕರುಣಾಕರ ನಾಯಕ್

contributor

Editor - ಕರುಣಾಕರ ನಾಯಕ್

contributor

Similar News