×
Ad

ಲಾಲು ಪುತ್ರನ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು

Update: 2017-06-18 15:00 IST

ಪಾಟ್ನ,ಜೂ. 18: ಬಿಹಾರ್ ಸಚಿವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‌ರ ಪುತ್ರ ತೇಜ್‌ಪ್ರತಾಪ್ ಯಾದವ್‌ರ ಪೆಟ್ರೋಲ್ ಬಂಕ್‌ನ ಪರವಾನಿಗೆಯನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ರದ್ದುಪಡಿಸಿದೆ. ಅದೇ ವೇಳೆ , ಈ ಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಿದೆ ಎಂದು ಆರ್‌ಜೆಡಿಯ ಮೂಲಗಳು ತಿಳಿಸಿವೆ.

ಲೈಸನ್ಸ್ ಪಡೆಯಲು ನಕಲಿದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತೇಜ್‌ಪ್ರತಾಪ್ ವಿರುದ್ಧ ಕಂಪೆನಿ ಅಧಿಕಾರಿಗಳು ಆರೋಪ ಹೊರಿಸಿದ್ದಾರೆ.ಕಳೆದ ಮೇ 29 ಕ್ಕೆ ಭಾರತ್ ಪೆಟ್ರೊಲಿಯಂ ತೇಜ್‌ಪ್ರತಾಪ್‌ಗೆ ಶೋಕಾಸ್ ನೋಟಿಸ್ ಕಳುಹಿಸಿತ್ತು. ಅದರೆ ಅದಕ್ಕೆ ನೀಡಿದ ಉತ್ತರ ತೃಪ್ತಿಕರವಾಗಿಲ್ಲ ಎಂದು ತಿಳಿಸಿ ಅದು ಲೈಸನ್ಸ್ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News