×
Ad

ಆರೆಸ್ಸೆಸ್ ಕಾರ್ಯಕರ್ತನ ಕೊಲೆ: ಇಬ್ಬರು ಸಿಪಿಎಂ ಕಾರ್ಯಕರ್ತರ ಬಂಧನ

Update: 2017-06-18 15:48 IST

ಪಯ್ಯನ್ನೂರ್,ಜೂ. 18: ಆರೆಸ್ಸೆಸ್ ಕಾರ್ಯಕರ್ತ ರಾಮಂತಳಿ ಮಂಡಲ ಕಾರ್ಯವಾಹಕ್ ಎಟ್ಟಿಕುಳಂ ಕಕ್ಕಂಪಾರದ ಬಿಜುರನ್ನುಕಡಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಸಿಪಿಎಂ ಕಾರ್ಯಕರ್ತರು ಪಯ್ಯನ್ನೂರ್ ಸಿಐ ಎಂ.ಪಿ. ಪ್ರಸಾದ್ ಬಂಧಿಸಿದ್ದಾರೆ. ನಂತರ ಇವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಕೊಲೆಕೃತ್ಯ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಲು ಸಹಾಯ ಮಾಡಿದ ಮೂತ್ತತ್ತಿಯ ಆಟೊ ಚಾಲಕ ಪಿ.ರಮೇಶನ್(47), ಟಿ.ವಿ. ಧನೇಶ್(32) ಎಂಬಿಬ್ಬರನ್ನು ಬಂಧಿಸಲಾಗಿದೆ.

ಇದರೊಂದಿಗೆ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಆದರೆ ಕೊಲೆಗೆ ಸಂಚು ಹೆಣೆದ ಮೂವರನ್ನು ಮತ್ತು ಕೊಲೆಯಲ್ಲಿ ನೇರ ಭಾಗಿಯಾದ ಇಬ್ಬರನ್ನು ಪೊಲೀಸರು ಇನ್ನಷ್ಟೇ ಬಂಧಿಸಬೇಕಾಗಿದೆ. ಈ ಪ್ರಕರಣದಲ್ಲಿ ಒಟ್ಟು ಐದುಮಂದಿಯನ್ನು ಪೊಲೀಸರು ಇನ್ನಷ್ಟೇ ಬಂಧಿಸಬೇಕಾಗಿದೆ. ಈಹಿಂದೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಅರೋಪಿಗಳನ್ನು ಪ್ರಶ್ನಿಸಿದಾಗ ಅಡಗಿ ಕೂತು ಕೊಳ್ಳಲು ನೆರವಾದವರ ಹೆಸರನ್ನು ಮತ್ತು ಸಂಚು ನಡೆಸಿದವರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News