ಅಮೆರಿಕ: ‘ಕೃಪಣ’ ಒಯ್ಯುತ್ತಿದ್ದ ಸಿಖ್ ವ್ಯಕ್ತಿಯ ಬಂಧನ

Update: 2017-06-18 13:52 GMT

ವಾಶಿಂಗ್ಟನ್, ಜೂ. 18: ಸಿಖ್ ಧರ್ಮಕ್ಕೆ ಮತಾಂತರಗೊಂಡಿರುವ 33 ವರ್ಷದ ಓರ್ವ ವ್ಯಕ್ತಿಯನ್ನು ಆತ ‘ಕೃಪಣ’ವನ್ನು ಒಯ್ಯುತ್ತಿದ್ದ ಕಾರಣಕ್ಕೆ ಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜಸ್ಟಿನ್ ಸ್ಮಿತ್ ಎಂಬವರು ಒಂಬತ್ತು ವರ್ಷಗಳ ಹಿಂದೆ ಸಿಖ್ ಧರ್ಮಕ್ಕೆ ಮತಾಂತರ ಹೊಂದಿ ಹರ್‌ಪ್ರೀತ್ ಸಿಂಗ್ ಖಾಲ್ಸ ಆಗಿದ್ದರು. ಸಿಖ್ ಧರ್ಮದ ಸಂಪ್ರದಾಯದಂತೆ ಹೊರಗೆ ಹೋಗುವಾಗ ತನ್ನೊಂದಿಗೆ ‘ಕೃಪಣ’ ಎಂದು ಕರೆಯುವ ಸಾಂಪ್ರದಾಯಿಕ ಖಡ್ಗವನ್ನು ಒಯ್ಯುತ್ತಿದ್ದರು.

ಕಳೆದ ವಾರ ಮೇರಿಲ್ಯಾಂಡ್‌ನ ಕ್ಯಾಟನ್ಸ್‌ವಿಲ್ ಅಂಗಡಿಯೊಂದರಲ್ಲಿ ದಿನಸಿ ಸಾಮಾನುಗಳನ್ನು ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಅಂಗಡಿಯಲ್ಲಿದದ ಗ್ರಾಹಕನೊಬ್ಬ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದ.

ಇಂಥ ಅನುಭವ ತನಗೆ ಹಲವು ಬಾರಿ ಆಗಿದೆ ಎಂದು ಖಾಲ್ಸ ಹೇಳಿದ್ದಾರೆ.

ಅಲ್ಲಿಗೆ ಧಾವಿಸಿ ಬಂದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಈ ಖಡ್ಗವು ಧರ್ಮದ ಒಂದು ಭಾಗವಾಗಿದೆ ಎಂಬುದನ್ನು ಖಚಿತಪಡಿಸಿದ ಬಳಿಕ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News