ರಾಷ್ಟ್ರಪತಿ ಚುನಾವಣೆ: ಸಂಸದರಿಗೆ ಹಸಿರು, ಶಾಸಕರಿಗೆ ಗುಲಾಬಿ ಮತಪತ್ರ

Update: 2017-06-18 14:48 GMT

    ಹೊಸದಿಲ್ಲಿ, ಜೂ.18: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಹಸಿರುಬಣ್ಣದ ಮತಪತ್ರಗಳಲ್ಲಿ ಹಾಗೂ ಶಾಸಕರು ಗುಲಾಬಿ ಬಣ್ಣದ ಮತಪತ್ರಗಳಲ್ಲಿ ತಮ್ಮ ಮತಚಲಾಯಿಸಲಿದ್ದಾರೆ.

    ಒಂದು ವೇಳೆ ಎನ್‌ಡಿಎ ಹಾಗೂ ಪ್ರತಿಪಕ್ಷಗಳು ಪ್ರತ್ಯೇಕವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಲ್ಲಿ ಹಾಗೂ ಜುಲೈ 1ರ ಸಂಜೆಯೊಳಗೆ ಈ ಅಭ್ಯರ್ಥಿಗಳಲ್ಲಿ ಯಾರಾದರೂ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳದೆ ಇದ್ದಲ್ಲಿ, ಚುನಾವಣೆಯು ಅನಿವಾರ್ಯವಾಗಲಿದ್ದು,, ಆಯೋಗವು ಮತಪತ್ರಗಳನ್ನು ಮುದ್ರಿಸುವ ಅಂತಿಮ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಶಾಸಕರ ಮತದ ವೌಲ್ಯವು ಅವರು ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯ ಪ್ರಮಾಣವನ್ನು ಅವಲಂಭಿಸಿರುತ್ತದೆ. ಆದರೆ ಪ್ರತಿಯೊಬ್ಬ ಸಂಸತ್ ಸದಸ್ಯನ ಮತ ವೌಲ್ಯವು 708 ಆಗಿದ್ದು, ಅದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

 ಮತಪತ್ರಗಳ ಬಣ್ಣಗಳನ್ನು ಆಧರಿಸಿ, ಚುನಾವಣಾ ಸಿಬ್ಬಂದಿಗೆ ಮತಗಳನ್ನು ಏಣಿಕೆ ಮಾಡಲು ಸುಲಭವಾಗಲಿದೆ.

 ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲಿರುವವರ ಮತದಾನ ಮಾಡಲಿರುವ ಲೋಕಸಭಾ ಸದಸ್ಯರು ಹಾಗೂ ಶಾಸಕರ ಒಟ್ಟು ಮತ ವೌಲ್ಯ 10,98,903 ಆಗಿರುತ್ತದೆ.

ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ಜುಲೈ 20ರಂದು ಮತಏಣಿಕೆಗಾಗಿ ದಿಲ್ಲಿಗೆ ತರಲಾಗುವುದು.

 ರಾಷ್ಟ್ರಪತಿ ಚುನಾವಣೆಗೆ 4120 ಶಾಸಕರು ಹಾಗೂ 776 ಚುನಾಯಿತ ಸಂಸದರು ಸೇರಿದಂತೆ ಒಟ್ಟು 4896 ಮಂದಿ ಮತದಾರರು ಮತಚಲಾಯಿಸಲಿದ್ದಾರೆ. ಸಂಸದರ ಪೈಕಿ 233 ಮಂದಿ ರಾಜ್ಯಸಭೆ ಹಾಗೂ 543 ಮಂದಿ ಲೋಕಸಭಾ ಸದಸ್ಯರು.

ಅರುಣಾಚಲ ಪ್ರದೇಶ, ಬಿಹಾರ, ಚತ್ತೀಸ್‌ಗಢ, ಹರ್ಯಾಣ, ಹಿಮಾಚಲಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಮೇಘಾಲಯ, ಮಿರೆರಾಮ್, ನಾಗಾಲ್ಯಾಂಡ್, ರಾಜಸ್ಥ್ಖಾನ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ರಾಜಧಾನಿ ದಿಲ್ಲಿಗೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮತಪತ್ರಗಳನ್ನು ಮುದ್ರಿಸಲಾಗುವುದು ಹಾಗೂ ಅವುಗಳ ನ್ನು ಸ್ವತಃ ಚುನಾವಣಾ ಆಯೋಗವೇ ಮುದ್ರಿಸಲಿದೆ.

ಆದರೆ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಜಮ್ಮುಕಾಶ್ಮೀರ, ಕೇರಳ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಪಂಜಾಬ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಗಳಲ್ಲಿ ಮತಪತ್ರಗಳನ್ನು ಹಿಂದಿ ಹಾಗೂ ಇಂಗ್ಲೀಷ್ ಅಲ್ಲದೆ ಆಯಾ ರಾಜ್ಯಗಳ ಅಧಿಕೃತ ಭಾಷೆಗಳಲ್ಲಿ ಮುದ್ರಿಸಲಾಗುವುದು.

ರಾಷ್ಟ್ರಪತಿ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಸಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News