ಫ್ರಾನ್ಸ್ ಸಂಸದೀಯ ಚುನಾವಣೆ: ಅಧ್ಯಕ್ಷರ ಪಕ್ಷಕ್ಕೆ ಭಾರೀ ಬಹುಮತ

Update: 2017-06-19 13:37 GMT

ಪ್ಯಾರಿಸ್, ಜೂ. 19: ಫ್ರಾನ್ಸ್‌ನಲ್ಲಿ ರವಿವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ನೂತನ ಪಕ್ಷ ಬೃಹತ್ ಗೆಲುವೊಂದನ್ನು ದಾಖಲಿಸಿದೆ. ದೇಶದ ಕಾರ್ಮಿಕ ಕಾನೂನುಗಳಿಗೆ ಪುನಶ್ಚೇತನ ನೀಡಲು ‘ಮ್ಯಾಕ್ರೋನ್ಸ್ ರಿಪಬ್ಲಿಕ್’ಗೆ ಪ್ರಬಲ ಜನಾದೇಶವನ್ನು ನೀಡಿದೆ.

ಫ್ರಾನ್ಸ್‌ನ ಪ್ರಭಾವಶಾಲಿ ಕೆಳಮನೆ, 577 ಸದಸ್ಯ ಬಲದ ನ್ಯಾಶನಲ್ ಅಸೆಂಬ್ಲಿಯಲ್ಲಿ ಮ್ಯಾಕ್ರೋನ್ಸ್ ರಿಪಬ್ಲಿಕ್ 355ರಿಂದ 425 ಸ್ಥಾನಗಳನ್ನು ಗಳಿಸಬಹುದು ಎಂಬ ಸೂಚನೆಯನ್ನು ಚುನಾವಣಾ ಆಯೋಗ ನೀಡಿದೆ. ಇದು ಸರಳ ಬಹುಮತಕ್ಕೆ ಬೇಕಾದ 289 ಸ್ಥಾನಗಳಿಗಿಂತ ತುಂಬಾ ಹೆಚ್ಚಾಗಿದೆ.

ಈವರೆಗೆ ಅಸೆಂಬ್ಲಿಯಲ್ಲಿ ಪ್ರಾಬಲ್ಯ ಹೊಂದಿದ್ದ ಸೋಶಿಯಲಿಸ್ಟ್ ಪಾರ್ಟಿ ಮತ್ತು ಅದರ ಮಿತ್ರತು 50ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಆದರೆ, ಈ ಚುನಾವಣೆಯಲ್ಲಿ ಮತದಾರರು ತೀರಾ ನಿರಾಸಕ್ತಿ ಹೊಂದಿದ್ದರು. ಕೇವಲ 35 ಶೇಕಡ ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News