ಆತ್ಮಹತ್ಯೆಗೆ ಶರಣಾದ ಚಿತ್ರನಟಿ ಅಂಜಲಿ
Update: 2017-06-19 21:25 IST
ಮುಂಬೈ, ಜೂ. 19: ಚಿತ್ರನಟಿ ಅಂಜಲಿ ಶ್ರೀವಾತ್ಸವ ಅವರ ಮೃತದೇಹ ಪಶ್ಚಿಮ ಅಂಧೇರಿಯಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ.
29ರ ಹರೆಯದ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನೇಕ ಬಾರಿ ಫೋನ್ ಕರೆ ಮಾಡಿದರೂ ಅಂಜಲಿ ಶ್ರೀವಾತ್ಸವ ಸ್ವೀಕರಿಸದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಮನೆ ಮಾಲಿಕನ ನೆರವಿನಿಂದ ನಕಲಿ ಕೀಲಿ ಕೈ ಬಳಸಿ ಮನೆ ಬಾಗಿಲು ತೆರೆದಿದ್ದರು. ಈ ಸಂದರ್ಭ ಅಂಜಲಿ ಶ್ರೀವಾಸ್ತವ ಅವರ ಮೃತದೇಹ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು.
ಆಕೆಯ ನಿವಾಸದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಆತ್ಮಹತ್ಯೆ ಹಿಂದಿರುವ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.