ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Update: 2017-06-20 06:31 GMT

ಮಂಗಳೂರು, ಜೂ.20: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವವನ್ನು ಬೆಳೆಸಿಕೊಳ್ಳಲು ಅನೇಕ ಅವಕಾಶಗಳು ದೊರೆಯುತ್ತವೆ. ಇದನ್ನು ಬಳಸಿಕೊಂಡು ಉತ್ತಮ ನಾಯಕರಾಗಲು ಪ್ರಯತ್ನಿಸಿ ಎಂದು ವಂ. ಫಾ.ವಿಲ್ಸನ್ ವೈಟಸ್ ಡಿಸೋಜ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಶಾಲಾ ಸಂಸತನ್ನು ಉದ್ಘಾಟನೆಗೈದು ಮಾತನಾಡುತ್ತಿದ್ದರು.

ಶಾಲಾ ಪ್ರಾಂಶುಪಾಲ ಫಾ.ರಾಬರ್ಟ್ ಡಿಸೋಜ ಮಾತನಾಡಿ, ಶಾಲಾ ನಾಯಕ - ನಾಯಕಿ ಹಾಗೂ ಎಲ್ಲಾ ಪದಾಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ವಿವರಿಸಿ ಶಾಲಾ ಸಂಸತ್ತಿನ ಪದಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಬ್ನರ್ ಪಿಂಟೊ ಶಾಲಾ ನಾಯಕನಾಗಿ, ಮೇಘನಾ ಕಶ್ಯಪ್ ಶಾಲಾ ನಾಯಕಿಯಾಗಿ ಪ್ರತಿಜ್ಞೆಗೈದರು. ಸಾಕ್ಷಿ ಶೆಟ್ಟಿ ಸ್ವಾಗತಿಸಿದರು. ಶಾಲಾ ನೂತನ ನಾಯಕ ಅಬ್ನರ್ ಪಿಂಟೊ ವಂದಿಸಿದರು. ಅನಿತಾ ಥೋಮಸ್, ಮತ್ತು ಹೆನ್ರಿ ಮಸ್ಕರೇನ್ಹಸ್ ಕಾರ್ಯಕ್ರಮ ಸಂಯೋಜಿಸಿದರು. ವಿಶ್ವನಾಥ ದೇವಾಡಿಗ, ಶೈಲಾ ಪಿರೇರ ಸಹಕರಿಸಿದರು. ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News