ಸಿರಿಯ ನಿರಾಶ್ರಿತೆ ಯುನಿಸೆಫ್‌ನ ಸದ್ಭಾವನಾ ರಾಯಭಾರಿ

Update: 2017-06-20 13:01 GMT

ವಿಶ್ವಸಂಸ್ಥೆ, ಜೂ. 20: ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಸೋಮವಾರ 19 ವರ್ಷದ ಸಿರಿಯ ನಿರಾಶ್ರಿತೆ ಹಾಗೂ ಶಿಕ್ಷಣ ಕಾರ್ಯಕರ್ತೆ ಮುಝೂನ್ ಅಲ್ಮೆಲ್ಲಹನ್ ಅವರನ್ನು ತನ್ನ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿದೆ. ಮುಝೂನ್ ಯುನಿಸೆಫ್‌ನ ಅತ್ಯಂತ ಕಿರಿಯ ಸದ್ಭಾವನಾ ರಾಯಭಾರಿಯಾಗಿದ್ದಾರೆ.

ಮುಝೂನ್ ಅಧಿಕೃತ ನಿರಾಶ್ರಿತ ಸ್ಥಾನಮಾನದ ಪ್ರಥಮ ಸದ್ಭಾವನಾ ರಾಯಭಾರಿಯಾಗಿದ್ದಾರೆ ಎಂದು ಯುನಿಸೆಫ್ ಉಪ ಕಾರ್ಯಕಾರಿ ನಿರ್ದೇಶಕ ಜಸ್ಟಿನ್ ಫಾರ್ಸಿತ್ ಹೇಳಿದ್ದಾರೆ.

ಮುಝೂನ್ ಜೋರ್ಡಾನ್‌ನ ಝಾತರಿ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾಗ ಅವರಿಗೆ ಯನಿಸೆಫ್ ನೆರವು ನೀಡಿತ್ತು ಎಂದು ಯುನಿಸೆಫ್ ಹೇಳಿದೆ. ಮುಝೂನ್ ದಿವಂಗತ ನಟಿ ಹಾಗೂ ಸದ್ಭಾವನಾ ರಾಯಭಾರಿ ಆಡ್ರೆ ಹೆಪ್‌ಬರ್ನ್ ಅವರ ದಾರಿಯಲ್ಲೇ ಸಾಗುತ್ತಿದ್ದಾರೆ. ಹೆಪ್‌ಬರ್ನ್ ಕೂಡ ಚಿಕ್ಕಂದಿನಲ್ಲಿ ಯುನಿಸೆಫ್‌ನಿಂದ ನೆರವು ಪಡೆದಿದ್ದರು.

ತಾನು ಸಿರಿಯದಿಂದ ಪಲಾಯನಗೈಯುತ್ತಿದ್ದಾಗ ಶಾಲಾ ಪುಸ್ತಕಗಳನ್ನು ಮಾತ್ರ ಜೊತೆಗೆ ತಂದಿದ್ದೆ ಎಂದು ಮುಝೂನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News