×
Ad

ಸರ್ದಾರ್ ಸಿಂಗ್‌ರನ್ನು ವಿಚಾರಣೆ ನಡೆಸಿದ ಇಂಗ್ಲೆಂಡ್ ಪೊಲೀಸ್

Update: 2017-06-20 23:53 IST

ಹೊಸದಿಲ್ಲಿ, ಜೂ.20: ಒಂದು ವರ್ಷದ ಹಳೆಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡ್ ಪೊಲೀಸರು ಭಾರತದ ಸ್ಟಾರ್ ಹಾಕಿ ಆಟಗಾರ ಸರ್ದಾರ್ ಸಿಂಗ್‌ರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಯಾರ್ಕ್‌ಶೈರ್ ಪೊಲೀಸರು ಸರ್ದಾರ್‌ರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿದೆ.

 ಭಾರತದ ಮಾಜಿ ನಾಯಕ ಸರ್ದಾರ್ ಸಿಂಗ್ ವಿರುದ್ದ ಬ್ರಿಟನ್-ಭಾರತದ ಹಾಕಿ ಆಟಗಾರ್ತಿ ಅಶ್ಪಾಲ್ ಭೋಗಲ್ ಅವರು ಅತ್ಯಾಚಾರ ಆರೋಪ ಹೊರಿಸಿದ್ದು, ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಆರೋಪಿಸಿದ್ದರು.

ವಿಶ್ವ ಹಾಕಿ ವರ್ಲ್ಡ್ ಲೀಗ್ ನಡೆಯುತ್ತಿರುವಾಗಲೇ ಸರ್ದಾರ್‌ರನ್ನು ವಿಚಾರಣೆ ನಡೆಸಿರುವ ಇಂಗ್ಲೆಂಡ್ ಪೊಲೀಸರ ಕ್ರಮಕ್ಕೆ ಹಾಕಿ ಮ್ಯಾನೇಜ್‌ಮೆಂಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹಾಕಿ ಇಂಡಿಯಾದ ಮಾಜಿ ಮುಖ್ಯಸ್ಥ ಹಾಗೂ ಹಾಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಅಧ್ಯಕ್ಷ ನರೇಂದ್ರ ಬಾತ್ರಾ, ಇಂಗ್ಲೆಂಡ್ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರಶ್ನಿಸಿದ್ದಾರೆ.

ಎಫ್‌ಐಎಚ್ ಮುಖ್ಯಸ್ಥನಾಗಿ ನಾನು ಈ ಬಗ್ಗೆ ಏನೂ ಹೇಳಿಕೆ ನೀಡಲಾರೆ. ಭಾರತೀಯನಾಗಿ, ಮಾಜಿ ಹಾಕಿ ಇಂಡಿಯಾದ ಅಧ್ಯಕ್ಷನಾಗಿ, ವೈಯಕ್ತಿಕ ನೆಲೆಯಲ್ಲಿ ನಾನು ಇದನ್ನು ತೀವ್ರವಾಗಿ ಖಂಡಿಸುವೆ. ಪೂರ್ವಮಾಹಿತಿ ನೀಡದೇ ಅಂತಾರಾಷ್ಟ್ರೀಯ ಟೂರ್ನಿ ನಡೆಯುತ್ತಿರುವಾಗ ಅಂತಾರಾಷ್ಟ್ರೀಯ ಅಥ್ಲೀಟ್‌ವೊಬ್ಬರನ್ನು ವಿಚಾರಣೆಗೆ ಗುರಿಪಡಿಸಿದ್ದು ಪ್ರಶ್ನಾರ್ಹವಾಗಿದೆ ಎಂದು ಬಾತ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News