ಆ ದಿನದಿಂದ ನಾನು ಯಾವತ್ತೂ ಸಾಯಲು ಪ್ರಯತ್ನಿಸಲಿಲ್ಲ: ರೈಹಾನ್

Update: 2017-06-21 08:31 GMT

ಕೆಲ ತಿಂಗಳುಗಳ ಹಿಂದೆ ನಾನು ಸಾಯಲು ಯತ್ನಿಸಿದೆ. ನನಗೆ ನನ್ನ ತಾಯಿಯ ಬಳಿ ಹೋಗಬೇಕಿತ್ತು. ಸಾವಿನ ನಂತರ ಜನರು ಹಸಿವು ಮತ್ತು ರೋಗಗಳಿಲ್ಲದ ಇನ್ನೊಂದು ಲೋಕಕ್ಕೆ ಹೋಗುತ್ತಾರೆ ಎಂದು ನಾನು ನಂಬಿದ್ದೇನೆ.ಹೀಗಾಗಿ ಹೇಗಾದರೂ ಮಾಡಿ ಅಲ್ಲಿ ಹೋಗಲೇಬೇಕೆಂದು ನಾನು ನಿರ್ಧರಿಸಿದೆ.

ನನಗೆ ತಿನ್ನಲು ಏನೂ ಸಿಗದೇ ಇದ್ದಾಗ ಆಕೆಯೊಡನೆ ಯಾವತ್ತೂ ನಾನು ದೂರುತ್ತಿದ್ದುದರಿಂದ ನನ್ನ ತಾಯಿ ನನಗಾಗಿ ತೀವ್ರ ಹಂಬಲದಿಂದ ಕಾದಿದ್ದಾರೆಂದು ನನಗನಿಸಿತ್ತು. ಆಕೆ ಸಾಯದೇ ಇರುತ್ತಿದ್ದರೆ ನನಗೆ ಇಷ್ಟೊಂದು ಕಷ್ಟ ಪಡುವ ಪ್ರಮೇಯವೇ ಇರುತ್ತಿರಲಿಲ್ಲ. ನನಗೆ ಹಸಿವನ್ನು ತಡೆಯಲು ಸಾಧ್ಯವಿಲ್ಲ ಎಂದು ಆಕೆಗೆ ಚೆನ್ನಾಗಿ ಗೊತ್ತಿತ್ತು.

ಆಹಾರವಿಲ್ಲದೆ ಹೆಚ್ಚೆಂದರೆ ಎರಡು ದಿನ ನನಗೆ ಇರಬಹುದಾಗಿತ್ತು ಅದಕ್ಕಿಂತ ಹೆಚ್ಚು ಅಲ್ಲ. ನಂತರ ನಾನು ಹಸಿದ ನಾಯಿಯಂತಾಗುತ್ತೇನೆ. ಅದರೆ ನಾಯಿಗಳು ಕೊಳೆತ ವಸ್ತುಗಳನ್ನು ಕಸದ ತೊಟ್ಟಿಗಳಿಂದ ತಿನ್ನಬಲ್ಲವು, ಆದರೆ ನನಗೆ ಅದು ಸಾಧ್ಯವಿಲ್ಲ. ಅದಕ್ಕಾಗಿ ನನಗೆ ಸಾಯಬೇಕಿತ್ತು. ಆದರೆ ಸಾಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಅದು ತುಂಬಾ ಭಯ ಹುಟ್ಟಿಸುತ್ತಿತ್ತು.

ನಾನು ರೈಲು ಪಟ್ಟಿಯಲ್ಲಿ ಮಲಗಿ ರೈಲು ಬರಲು ಕಾಯುತ್ತಿದ್ದಾಗ ಏನೋ ವಿಚಿತ್ರ ನಡೆಯಿತು. ಅಪರಿಚಿತನೊಬ್ಬ ಬಂದು ನನ್ನತ್ತ ನೋಡಿ ಬೊಬ್ಬೆ ಹೊಡೆಯಲಾರಂಭಿಸಿದ್ದ. ಆತ ನನ್ನನ್ನು ಎಬ್ಬಿಸಿ ನನ್ನ ಬಟ್ಟೆಗಳಲ್ಲಿದ್ದ ಧೂಳನ್ನ ಕೊಡವಿದ್ದ. ನನಗೇನಾಯಿತು ಎಂದು ಆತ ಕೇಳಿದೆ. ಆತನಿಗೆ ಏನೂ ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ.

ಆತ ನನಗೆ ಬೈದಾಗ ನಾನು ಅಳಲಾರಂಭಿಸಿದೆ. ನನಗೆ ಹಸಿವಾಗಿದೆಯೆಂದು ನಾನು ಆತನಿಗೆ ಹೇಳಲಿಲ್ಲ. ಅಲ್ಲಿ ಅದಾಗಲೇ ದೊಡ್ಡ ಗುಂಪು ಸೇರಿತ್ತು ಹಾಗೂ ಜನರು ನನ್ನನ್ನು ಪೊಲೀಸರಿಗೊಪ್ಪಿಸಬಹುದೆಂಬ ಭಯ ನನ್ನನ್ನು ಕಾಡಿತು. ಆದರೆ ಆ ವ್ಯಕ್ತಿ ನನ್ನನ್ನು ರೆಸ್ಟೋರೆಂಟ್  ಒಂದಕ್ಕೆ ಕರೆದುಕೊಂಡು ಹೋಗಿ ಆಹಾರ ನೀಡಿದ. ನಾನು ತುಂಬಾ ತಿಂದೆ. ನಾನು ನಗುವಂತೆ ಆತ ಮಾಡಿದ.

ನಾವು ನನ್ನ ಗ್ರಾಮದ ಬಗ್ಗೆ, ನನ್ನ ತಾಯಿಯ ಬಗ್ಗೆ ಹಾಗೂ ಪೊಲೀಸ್ ಠಾಣೆಯ ಬಗ್ಗೆ ಮಾತನಾಡಿದೆವು. ಆತ ಹೊರಟಾಗ ನಾನೊಬ್ಬ ಒಳ್ಳೆಯ ಹುಡುಗ ಎಂದು ಆತ ಹೇಳಿದ. ನಾನು ಜೀವನದಲ್ಲಿ ಏನಾದರೂ ಸಾಧಿಸಿ ನನ್ನ ತಾಯಿಗೆ ಹೆಮ್ಮೆಯುಂಟು ಮಾಡುತ್ತೇನೆಂದೂ ಆತ ಹೇಳಿದ. ಆ ದಿನದಂದಿನಿಂದ ನಾನು ಯಾವತ್ತೂ ಸಾಯಲು ಪ್ರಯತ್ನಿಸಲಿಲ್ಲ.

-ರೈಹಾನ್ (12).

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News