×
Ad

ಯೋಗವನ್ನು ಹೈಜಾಕ್ ಮಾಡಲು ಬಿಡಲಾರೆ: ಪಿಣರಾಯಿ ವಿಜಯನ್

Update: 2017-06-21 16:09 IST

ತಿರುವನಂತಪುರಂ,ಜೂ. 21: ಯೋಗ ಒಂದು ಧಾರ್ಮಿಕ ಆಚಾರವಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅವರು ರಾಜ್ಯಮಟ್ಟದ ಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕೆಲವರು ಕೆಲವು ಸೂಕ್ತಗಳನ್ನೆಲ್ಲ ಹೇಳಿ ಯೋಗವನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಅದಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ. ಈ ಸೂಕ್ತಗಳನ್ನು ಉಂಟು ಮಾಡುವ ಮೊದಲೇ ಯೋಗ ಇತ್ತು. ಯೋಗವೆಂದರೆ ಎಲ್ಲರಿಗೂ ಮಾಡಲು ಸಾಧ್ಯವಿರುವ ವ್ಯಾಯಾಮವಾಗಿದೆ. ಸ್ವತಂತ್ರ ಮನಸ್ಸಿನಲ್ಲಿ ಯೋಗ ತರಬೇತಿ ಪಡೆಯಬೇಕು. ಇದನ್ನು ಶಾಲೆಯಲ್ಲಿ ಕಲಿಸಲು ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News