ಮಧ್ಯಪ್ರಾಚ್ಯ ಸಂಧಾನಕ್ಕೆ ಮರುಜೀವ ನೀಡಲು ಅಳಿಯನನ್ನು ಕಳುಹಿಸಿದ ಟ್ರಂಪ್

Update: 2017-06-21 14:01 GMT

ಜೆರುಸಲೇಂ, ಜೂ. 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಳಿಯ ಹಾಗೂ ಮಧ್ಯಪ್ರಾಚ್ಯ ವಿಷಯದಲ್ಲಿ ಅವರ ಪ್ರಮುಖ ಸಲಹಾಕಾರ ಜೇರ್ಡ್‌ ಕಶ್ನರ್ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದ್ದಾರೆ. ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವಿನ ಶಾಂತಿ ಒಪ್ಪಂದಕ್ಕೆ ವೇದಿಕೆ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅವರು ಹೊಂದಿದ್ದಾರೆ.

ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳ ನಡುವೆ ಸಂಧಾನ ಏರ್ಪಡಿಸುವಲ್ಲಿ ಈ ಹಿಂದಿನ ಸರಕಾರಗಳು ವಿಫಲವಾಗಿವೆ. ಆದರೆ, ಈ ವಿಷಯದಲ್ಲಿ ಟ್ರಂಪ್ ಹೆಚ್ಚಿನ ಅನುಕೂಲಗಳನ್ನು ಹೊಂದಿದ್ದಾರೆ.

ಆದರೆ, ಉಭಯ ಬಣಗಳ ನಡುವಿನ ವಿಭಜನೆ ತೀರಾ ಆಳವಾಗಿದ್ದು, ಯಾವುದೇ ಮಹತ್ವದ ಮುನ್ನಡೆಯ ಅವಕಾಶಗಳಿಗೆ ಹಿನ್ನಡೆಯಾಗಿ ಪರಿಣಮಿಸಬಹುದು.

ಕಶ್ನರ್ ಮತ್ತು ಅವರ ಪ್ರತಿನಿಧಿ ಜಾಸನ್ ಗ್ರೀನ್‌ಬ್ಲಾಟ್ ಮಧ್ಯಪ್ರಾಚ್ಯದಲ್ಲಿ ಏನಾದರೂ ಮಹತ್ವದ ಸಾಧನೆ ಮಾಡುವ ಅವಕಾಶ ವಿರಳ ಎಂದು ಪರಿಗಣಿಸಲಾಗಿದೆ.

ಟ್ರಂಪ್ ತನ್ನ ಅಧಿಕಾರಾವಧಿಯ ಕೆಲವೇ ತಿಂಗಳಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನ್ ಎರಡೂ ದೇಶಗಳ ಜೊತೆಗೆ ಒಳ್ಳೆಯ ಕೆಲಸದ ಸಂಬಂಧವನ್ನು ಹೊಂದಿದ್ದಾರೆ. ಕಳೆದ ತಿಂಗಳು ಅವರು ಈ ವಲಯಕ್ಕೆ ಯಶಸ್ವಿ ಭೇಟಿ ನೀಡಿದ್ದರು.

ಅದೇ ವೇಳೆ, ಶ್ರೀಮಂತ ಯಹೂದಿ ರಿಯಲ್ ಎಸ್ಟೇಟ್ ವ್ಯಾಪಾರಿಯ ಮಗನಾಗಿರುವ ಕಶ್ನರ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ವೈಯಕ್ತಿಕ ಸಂಪರ್ಕ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News