ಪೂರೈಕೆಯಲ್ಲಿ ಹೆಚ್ಚಳ: 7 ತಿಂಗಳ ಹಿಂದಿನ ಮಟ್ಟಕ್ಕೆ ತೈಲ ಬೆಲೆ

Update: 2017-06-21 14:16 GMT

ಲಂಡನ್, ಜೂ. 21: ಹಲವಾರು ಪ್ರಮುಖ ಪೆಟ್ರೋಲಿಯಂ ಉತ್ಪಾದಕ ದೇಶಗಳು ಪೂರೈಕೆಯನ್ನು ಹೆಚ್ಚಿಸಿವೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ತೈಲ ಬೆಲೆ ಮಂಗಳವಾರ ಏಳು ತಿಂಗಳ ಹಿಂದೆ ಇದ್ದ ಮಟ್ಟಕ್ಕೆ ಕುಸಿಯಿತು.

ಮಾದರಿ ಎಂದು ಪರಿಗಣಿಸಲಾಗುವ ಬ್ರೆಂಟ್ ದರ್ಜೆಯ ತೈಲದ ಬೆಲೆ ಬ್ಯಾರಲ್‌ಗೆ 1.29 ಡಾಲರ್ ಕುಸಿದು 45.62 ಡಾಲರ್ ಆಯಿತು. ಇದು ನವೆಂಬರ್ 15ರ ಬಳಿಕ ಅದರ ಕನಿಷ್ಠ ಬೆಲೆಯಾಗಿದೆ. ನವೆಂಬರ್ 15ರ ಬಳಿಕ ಎರಡು ವಾರಗಳಲ್ಲಿ ತೈಲ ಉತ್ಪಾದನೆಯನ್ನು ಜನವರಿಯಿಂದ ಆರು ತಿಂಗಳ ಕಾಲ ದಿನಕ್ಕೆ 18 ಲಕ್ಷ ಬ್ಯಾರಲ್‌ಗೆ ಕಡಿತಗೊಳಿಸಲು ಒಪೆಕ್ ಮತ್ತು ಇತರ ಉತ್ಪಾದಕ ದೇಶಗಳು ನಿರ್ಧರಿಸಿದವು.

ಜುಲೈಯಲ್ಲಿ ವಿತರಣೆಗೆ ನಿಗದಿಯಾಗಿರುವ ಅಮೆರಿಕದ ಕಚ್ಚಾ ತೈಲದ ಬೆಲೆಯು ಮಂಗಳವಾರ ಬ್ಯಾರಲ್‌ಗೆ 1.27 ಡಾಲರ್ ಕುಸಿದು, 42.93 ಡಾಲರ್ ಆಯಿತು. ಇದು ನವೆಂಬರ್ 14ರ ಬಳಿಕ ಅದರ ಕನಿಷ್ಠ ಬೆಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News