×
Ad

ಬೇನಾಮಿ ಆಸ್ತಿ ಪ್ರಕರಣ : ಮೀಸ ಭಾರತಿಯ ವಿಚಾರಣೆ

Update: 2017-06-21 20:41 IST

 ಹೊಸದಿಲ್ಲಿ, ಜೂ.21: 1,000 ಕೋಟಿ ರೂ.ಗೂ ಹೆಚ್ಚಿನ ಬೇನಾಮಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿರುವ ಮೀಸ ಭಾರತಿ(ಲಾಲೂ ಪ್ರಸಾದ್ ಯಾದವ್ ಪುತ್ರಿ) ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ಐದು ಗಂಟೆಗಳಷ್ಟು ಸುದೀರ್ಘ ವಿಚಾರಣೆ ನಡೆಸಿದರು.

  ಈ ಹಿಂದೆ ಜೂನ್ 6 ಮತ್ತು 12ರಂದು ಐಟಿ ಇಲಾಖೆ ಹೊರಡಿಸಿದ್ದ ಸಮನ್ಸ್‌ಗೆ ಮೀಸ ಭಾರತಿ ಪ್ರತಿಕ್ರಿಯಿಸಿರಲಿಲ್ಲ. ಇವರ ಪತಿ ಶೈಲೇಶ್ ಕುಮಾರ್‌ಗೂ ಇಲಾಖೆ ಜೂನ್ 7 ಮತ್ತು 12ರಂದು ಸಮನ್ಸ್ ಹೊರಡಿಸಿದ್ದು ಅವರೂ ಪ್ರತಿಕ್ರಿಯೆ ನೀಡಿರಲಿಲ್ಲ. ಮಂಗಳವಾರ ಲಾಲೂ ಪುತ್ರಿ ಮೀಸ ಭಾರತಿ ಮತ್ತವರ ಪತಿ ಶೈಲೇಶ್ ಕುಮಾರ್, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ , ಪುತ್ರಿಯರಾದ ಚಂದಾ ಮತ್ತು ರಾಗಿಣಿ ಯಾದವ್ ಅವರಿಗೆ ಸೇರಿದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು.

 ಮೀಸ ಭಾರತಿ ಮತ್ತಿತರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಚಾರ್ಟರ್ಡ್ ಅಕೌಂಟೆಂಟ್ ರಾಜೇಶ್ ಕುಮಾರ್ ಅಗರ್‌ವಾಲ್ ಎಂಬವರನ್ನು ಮೇ 22ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News