×
Ad

ಸಂಘಿಗಳು ಮಾತ್ರ ಭಯೋತ್ಪಾದಕರಾಗಲು ಸಾಧ್ಯ, ಹಿಂದೂಗಳಲ್ಲ: ಬಿಜೆಪಿಗೆ ಕುಟುಕಿದ ಕಾಂಗ್ರೆಸ್

Update: 2017-06-21 20:52 IST

ಹೊಸದಿಲ್ಲಿ, ಜೂ.21: “ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ” ಎನ್ನುವ ಹರ್ಯಾಣ ಸಚಿವ ಅನಿಲ್ ವಿಜ್ ಹೇಳಿಕೆಗೆ ಟಾಂಗ್ ನೀಡಿರುವ ಕಾಂಗ್ರೆಸ್ , “ಸಂಘಿಗಳು ಮಾತ್ರ ಭಯೋತ್ಪಾದಕರಾಗಲು ಸಾಧ್ಯ, ಹಿಂದೂಗಳಲ್ಲ” ಎಂದಿದೆ,

“ಅನಿಲ್ ವಿಜ್ ಸರಿಯಾಗಿಯೇ ಹೇಳಿದ್ದಾರೆ. ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಕೇವಲ ಸಂಘಪರಿವಾರದವರು ಮಾತ್ರ ಭಯೋತ್ಪಾದಕರಾಗಲು ಸಾಧ್ಯ” ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಅನಿಲ್ ವಿಜ್ ಹೇಳಿಕೆಯನ್ನು ಬೆಂಬಲಿಸಿದ್ದ ಬಿಜೆಪಿ. ಹಿಂದೂ ಧರ್ಮ ಮೂಲಭೂತವಾದವಲ್ಲ. ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಮೂಲಭೂತವಾದವಿದ್ದಿದ್ದರೆ ಅದರ ಅಸ್ತಿತ್ವವೇ ಇರುತ್ತಿರಲಿಲ್ಲ. ಹಿಂದೂಗಳಿಗೆ ಹಲವು ಗ್ರಂಥಗಳಿವೆ. ಕೆಲವರು ಶಿವನನ್ನು ಆರಾಧಿಸುತ್ತಾರೆ. ಕೆಲವರು ವಿಷ್ಣುವನ್ನು ಆರಾಧಿಸುತ್ತಾರೆ. ನಮಗೆ ಒಂದೇ ಗ್ರಂಥವಿಲ್ಲ ಒಂದೇ ಚರ್ಚ್ ಅಥವಾ ಮಕ್ಕಾ ಇಲ್ಲ. ವಿವಿಧ ಹಾಗೂ ಹಲವು ಪರ್ಯಾಯಗಳಿರುವ ಧರ್ಮ ಮೂಲಭೂತವಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News