ಏರ್ ಇಂಡಿಯಾ ಟಾಟಾ ಗುಂಪು ಪಾಲಾಗಲಿದೆಯೇ ?

Update: 2017-06-21 16:01 GMT

ಹೊಸದಿಲ್ಲಿ, ಜೂ. 21: ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಸರಕಾರದಿಂದ ಸಿಂಗಾಪುರ ಏರ್‌ಲೈನ್ಸ್‌ನ ಭಾಗೀದಾರಿಕೆಯಲ್ಲಿ ಟಾಟಾ ಗುಂಪು ಖರೀದಿಸುವ ಸಾಧ್ಯತೆ ಇದೆ.

 1953ರಲ್ಲಿ ರಾಷ್ಟ್ರೀಕರಣಗೊಳ್ಳುವ ಮೊದಲು ಏರ್ ಇಂಡಿಯಾದ ಸ್ವಾಮಿತ್ವವನ್ನು ಟಾಟಾ ಗುಂಪು ಹೊಂದಿತ್ತು. ಈ ಖರೀದಿ ಯಶಸ್ವಿಯಾದರೆ ಏರ್ ಇಂಡಿಯಾ ಮತ್ತೆ ಟಾಟಾ ಗುಂಪಿನ ತೆಕ್ಕೆಗೆ ಸೇರಿದಂತಾಗಲಿದೆ.

 ಟಾಟಾ ಗುಂಪಿನ ಅಧ್ಯಕ್ಷ ಎನ್. ಚಂದ್ರಶೇಖರನ್ ಏರ್ ಇಂಡಿಯಾ ಖರೀದಿಸಲು ಒಲವು ವ್ಯಕ್ತಪಡಿಸಿ ಸರಕಾರದೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದು, ಶೇ. 51 ಶೇರುಗಳೊಂದಿಗೆ ಏರಿಂಡಿಯಾದ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ.

 ಕಳೆದ ಒಂದು ದಶಕದಿಂದ ನಷ್ಟದಲ್ಲೇ ನಡೆಯುತ್ತಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರಕಾರ ಆಸಕ್ತಿ ವ್ಯಕ್ತಪಡಿಸುತ್ತಲೇ ಇತ್ತು. ಏರ್ ಇಂಡಿಯಾವನ್ನು ಖಾಸಗೀಕರಿಸಲು ವೈಮಾನಿಕ ಸಚಿವಾಲಯ ಎಲ್ಲ ಸಾಧ್ಯತೆಗಳನ್ನು ಶೋಧಿಸಬೇಕು ಎಂದು ಇತ್ತೀಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ಪ್ರಸ್ತುತ ಏರ್ ಇಂಡಿಯಾ 52 ಸಾವಿರ ಕೋಟಿ. ರೂ. ಸಾಲದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News