ಯೋಗ ಭಾರತವನ್ನು ಜಗತ್ತಿನೊಂದಿಗೆ ಜೋಡಿಸಿದೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ

Update: 2017-06-21 16:19 GMT

ಲಕ್ನೋ, ಜೂ. 21: ಋಷಿ, ಸಂತರ ಅನುಸರಿಸಿದ ಪ್ರಾಚೀನ ಸಂಪ್ರದಾಯವಾದ ಯೋಗ ಯುವಕರನ್ನೂ ಆಕರ್ಷಿಸುತ್ತಿದೆ ಎಂದು ಬುಧವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 ಇಲ್ಲಿನ ವಿಶಾಲ ರಮಾಭಾ ಅಂಬೇಡ್ಕರ್ ಮೈದಾನದಲ್ಲಿ ಬುಧವಾರ ಬೆಳಗ್ಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭ ಸಾವಿರಾರೂ ಯೋಗ ಆಶಕ್ತರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡಿದರು.

 ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಬೆಳಗ್ಗೆ 6.40ಕ್ಕೆ ಮೈದಾನಕ್ಕೆ ಆಗಮಿಸಿದರು. ಸೇರಿದವರು ಉತ್ಸಾಹದಿಂದ ಮೋದಿ, ಮೋದಿ ಹಾಗೂ ಭಾರತ್ ಮಾತಾ ಕಿ ಜೈ ಎಂದು ಕೂಗಿಕೊಳ್ಳುತ್ತಿದ್ದಂತೆ ಪ್ರಧಾನಿ ಅವರು ವಿದ್ಯಾರ್ಥಿಗಳೊಂದಿಗೆ ಸೇರಿ ಯೋಗ ಮಾಡಲು ಅನುವಾದರು.

ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಯೋಗ ಮಾಡುವ ಉದ್ದೇಶದಿಂದ ಬೆಳಗ್ಗೆ 4 ಗಂಟೆಗೆ ಮೈದಾನಕ್ಕೆ ಆಗಮಿಸಿದ ಯೋಗ ಆಸಕ್ತರನ್ನು ಮೋದಿ ತನ್ನ ಭಾಷಣದಲ್ಲಿ ಪ್ರಶಂಶಿಸಿದರು. ಸುರಿಯುತ್ತಿರುವ ಮಳೆಯಲ್ಲೂ ಯೋಗ ಮಾಡಲು ತಾಳ್ಮೆಯಿಂದ ಕಾಯುತ್ತಿರುವ ಲಕ್ನೋದ ಜನರಿಗೆ ವಂದನೆಗಳು. ಮಳೆ ಸುರಿಯುತ್ತಿದ್ದರೂ ಯೋಗ ಮಾಡಲು ಸಾಧ್ಯ ಎಂಬ ಸಂದೇಶವನ್ನು ನಾವು ಇಂದು ಜಗತ್ತಿಗೆ ರವಾನಿಸಿದೆವು ಎಂದು ಅವರು ಹೇಳಿದರು.

ಮನಸ್ಸು, ಆತ್ಮ, ದೇಹ ಒಂದಕ್ಕೊಂದು ಸೇರಿದಂತೆ ಭಾಷೆ, ಸಂಸ್ಕೃತಿ ಮೊದಲಾದ ಅಡೆತಡೆ ಮೀರಿ ಜಗತ್ತಿನ ವಿವಧ ವಲಯದ ಜನರನ್ನು ಯೋಗ ಒಂದಾಗಿಸಿದೆ ಎಂದು ಪ್ರಧಾನಿ ಅವರು ಹೇಳಿದರು.

ಯೋಗ ಉಪ್ಪಿನಂತೆ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು ಎಂದು ಆಗ್ರಹಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಹಿಂದೆ ಯೋಗವನ್ನು ಸಂತರು ಮಾತ್ರ ಅನುಸರಿಸುತ್ತಿದ್ದರು. ಇಂದು ಯೋಗವನ್ನು ಪ್ರತೀ ಮನೆಯಲ್ಲೂ ಕಾಣುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News