×
Ad

ಗ್ರಾಮ ಕಚೇರಿಯಲ್ಲಿ ರೈತ ಆತ್ಮಹತ್ಯೆ: ಗ್ರಾಮ ಸಹಾಯಕ ಅಮಾನತು !

Update: 2017-06-22 13:35 IST

ಕ್ಯಾಲಿಕಟ್,ಜೂ. 22: ಕೇರಳದ ಚೆಂಬನಾಡದಲ್ಲಿ ಗ್ರಾಮ ಸಹಾಯಕನೊಬ್ಬ ಲಂಚ ಕೇಳಿದ್ದರಿಂದ ರೈತರೊಬ್ಬರು ಆತ್ಮಹತ್ಯೆ ನಡೆಸಿದ ಘಟನೆಗೆ ಸಂಬಂಧಿಸಿ ಗ್ರಾಮ ಸಹಾಯಕನ ಅಮಾನತು ಮಾಡಲಾಗಿದೆ. ಚೆಂಬನಾಡ ಗ್ರಾಮ ಸಹಾಯಕ ಶಿರೀಷ್‌ರನ್ನು ಜಿಲ್ಲಾಧಿಕಾರಿ ಯು.ವಿ. ಜೋಸ್ ಅವರು, ಆತ್ಮಹತ್ಯೆಗೆ ಶರಣಾದ ರೈತ ಜೋಯಿ ಎನ್ನುವರಿಂದ ಭೂ ತೆರಿಗೆ ತೆಗೆದುಕೊಳ್ಳಲು ಲಂಚ ಕೇಳಿದ ಆರೋಪದಲ್ಲಿ ಅಮಾನತುಗೊಳಿಸಿದ್ದಾರೆ. ಶಿರೀಷ್ ಲಂಚ ಕೇಳಿದ್ದರಿಂದ ಜೋಯಿ ಆತ್ಮಹತ್ಯೆ ಮಾಡಿಕೊಂಡರೆಂದು ಜೋಯಿಯ ಕುಟುಂಬ ದೂರು ನೀಡಿತ್ತು.

ಗ್ರಾಮ ಸಹಾಯಕ ಲಂಚ ಕೇಳಿದ್ದು ಸಾಬೀತಾದರೆ ಅಮಾನತು ಮಾಡಲಾಗುವುದು ಎಂದು ಸ್ಥಳ ಸಂದರ್ಶಿಸಿದ ವೇಳೆ ಜಿಲ್ಲಾಧಿಕಾರಿ ಹೇಳಿದ್ದರು. ರೆವೆನ್ಯೂ ಅಧಿಕಾರಿಗಳ ಲೋಪ ಜೋಯಿ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅದಕ್ಕೆ ಜವಾಬ್ದಾರರಾದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದರು. ಇಂದೇ ತೆರಿಗೆ ಪಡೆಯುವುದಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತೇನೆಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಭೂ ತೆರಿಗೆ ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೈತ ಜೋಯಿ ನಿನ್ನೆ ಗ್ರಾಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News