ವಾಸಯೋಗ್ಯ ಭೂಮಿಗಳ ಪತ್ತೆಗೆ ಬಾಹ್ಯಾಕಾಶಕ್ಕೆ ನೌಕೆ

Update: 2017-06-22 15:25 GMT

ಲಂಡನ್, ಜೂ. 22: ಇತರ ಸೌರವ್ಯೂಹಗಳಲ್ಲಿರಬಹುದಾದ ವಾಸಯೋಗ್ಯ ಭೂಮಿ ಗಾತ್ರದ ಗ್ರಹಗಳು ಮತ್ತು ಅವುಗಳಲ್ಲಿರಬಹುದಾದ ಜೀವಿಗಳ ಪತ್ತೆಗಾಗಿ ಆಳ ಬಾಹ್ಯಾಕಾಶ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಮುಂದಾಗಿದೆ.

ಪ್ಲಾನೆಟರಿ ಟ್ರಾನ್ಸಿಟ್ಸ್ ಆ್ಯಂಡ್ ಆಸಿಲೇಶನ್ಸ್ ಆಫ್ ಸ್ಟಾರ್ಸ್‌ (ಪ್ಲಾಟೊ) ಗಗನ ನೌಕೆಯನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ‘ಎಲ್2’ ಎಂಬ ಪ್ರದೇಶಕ್ಕೆ ಕಳುಹಿಸಲಾಗುವುದು. ಈ ನೌಕೆಯು ಬಾಹ್ಯಾಕಾಶದ ವಿಸ್ತಾರದ ಪ್ರದೇಶದಲ್ಲಿ ಸಾವಿರಾರು ಪ್ರಕಾಶಮಾನ ನಕ್ಷತ್ರಗಳ ಮೇಲೆ ನಿಗಾ ಇಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News